ಪ್ರದೀಪ ನಾಯಕ ಅವರಿಗೆ ಸನ್ಮಾನ

0
21
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಕಾಗಲ ಗ್ರಾಮ ಪಂಚಾಯತ ವ್ಯಾಪ್ತಿಯ ಬಿರ್ಕೋಡಿ ಗ್ರಾಮದ ಮುಸ್ಲಿಂ ಸಮುದಾಯದ ಕೇರಿಗೆ ಸಂಪರ್ಕಿಸುವ ರಸ್ತೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಜಿ ಪಂ ಸದಸ್ಯ ಪ್ರದೀಪ ನಾಯಕ ಅವರನ್ನು ಬಿರ್ಕೋಡಿ ಗ್ರಾಮಸ್ಥರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿ ಪಂ ಸದಸ್ಯ ಪ್ರದೀಪ ನಾಯಕ ಅವರು,ಬಿರ್ಕೋಡಿ ಗ್ರಾಮದ ಮುಸ್ಲಿಂ ಸಮುದಾಯದ ಕೇರಿಗೆ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಗದಗೆಟ್ಟಿದ್ದು, ಮಳೆಗಾಲದ ಪೂರ್ವದಲ್ಲಿ ಇಲ್ಲಿನ ರಸ್ತೆಯನ್ನು ಸರಿಪಡಿಸಿಕೊಡುವಂತೆ ಆ ಗ್ರಾಮದ ಜನರು ನನಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸುವ ಜೊತೆಗೆ ಹೆಚ್ಚಿನ ಮುತುವರ್ಜಿ ವಹಿಸಿ ಅಲ್ಲಿನ ರಸ್ತೆಯನ್ನು ದುರಸ್ತಿಮಾಡಿ ಆ ಭಾಗದ ಜನರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು.
ಬಾಡ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಪಟಗಾರ, ಸದಸ್ಯರಾದ ಸಯ್ಯದ್, ಲಬೋಧರ ನಾಯ್ಕ, ಖಾದರ್ ಕಾಗಲ, ಜೆಡಿಎಸ್ ತಾಲೂಕಾಧ್ಯಕ್ಷ ಮಂಜುನಾಥ ಪಟಗಾರ, ಜೆಡಿಎಸ್ ಯುವ ಅಧ್ಯಕ್ಷ ಹರೀಶ ನಾಯ್ಕ, ಪ್ರಮುಖರಾದ ದತ್ತಾ ಪಟಗಾರ, ಮುರಳಿ ಪಟಗಾರ, ಅಬ್ದುಲ್ ವಾಡೇಕರ್, ಯೂಶಪ್, ಸಾರಂಗ್, ಹಾಗೂ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

loading...