ಪ್ರಧಾನಿ ಮೋದಿಯನ್ನು ಹೊಗಳಿದ ಚೀನಾ ಮಾಧ್ಯಮ

0
32
Prime Minister of India Narendra Modi waves following a joint statement to the press with Mexican President Enrique Pena Nieto, in Los Pinos presidential residence in Mexico City, Wednesday, June 8, 2016. Modi met with the Mexican President Wednesday evening during a short working visit to the country.(AP Photo/Rebecca Blackwell)
loading...

ಬೀಜಿಂಗ್: ಗಡಿ ವಿವಾದವನು ಮೊಂದಿಟ್ಟುಕೊಂಡು ಭಾರತವನ್ನು ದೂಷಿಸುತ್ತಾ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಿದ್ದ ಚೀನಾ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ಈಗ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ವರದಿಯನ್ನು ಪ್ರಕಟಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರಕು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಜಾರಿಗೆ ತಂದಿರುವುದು ಐತಿಹಾಸಿಕ ನಡೆ ಎಂದು ಬಣ್ಣಿಸಿದ್ದು, ಈ ಹಿರಿಮೆ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ವರದಿ ಮಾಡಿದೆ.
ಚೀನಾದಿಂದ ಅತಿ ಕಡಿಮೆ ವೆಚ್ಚದ ತಯಾರಿಕಾ ಘಟಕಗಳು ನಿಧಾನವಾಗಿ ಹೊರ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಚೀನಾ ಸ್ಥಾನವನ್ನು ಭಾರತ ತುಂಬುವ ಸಾಧ್ಯತೆಗಳಿವೆ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ಲೇಖನವನ್ನು ಪ್ರಕಟಿಸಿದೆ.
ಚೀನಾ ಭಾರತದ ಗಡಿ ಸಿಕ್ಕಿಂ ಪ್ರದೇಶದ ವಿಷಯವಾಗಿ ಚೀನಾ ಪತ್ರಿಕೆ ಪ್ರತಿದಿನ ಭಾರತ ವಿರೋಧಿ ಲೇಖನಗಳನ್ನು ಪ್ರಕಟಿಸುತ್ತಿತ್ತು. ಈ ಮಧ್ಯೆ ಪ್ರಧಾನಿ ಮೋದಿ ಅವರ ಆಡಳಿತವನ್ನು ಹೊಗಳಿ ಬರೆದಿರುವುದು ಅಚ್ಚರಿ ಮೂಡಿಸಿದೆ.

loading...