ಬಂದ್ ಸಂಪೂರ್ಣ ಯಶಸ್ವಿ: ಪ್ರಯಾಣಿಕರ ಪರದಾಟ

0
38
loading...

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಮಹದಾಯಿ ಯೋಜನೆ ಅನುಷ್ಠಾನ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಳಂಭ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ಕರ್ನಾಟಕ ಜನಹಿತ ವೇದಿಕೆ ಕರೆಯಲಾಗಿದ್ದ ಗಜೇಂದ್ರಗಡ ಬಂದ್ ಉತ್ತಮ ಪತ್ರಿಕ್ರೀಯೆ ವ್ಯಕ್ತವಾಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಗ್ಗೆ 7 ಘಂಟೆಗೆ ಪ್ರತಿಭಟನಾಕಾರರು ಪಟ್ಟಣದ ಬಸ್‍ನಿಲ್ದಾಣ ಹಾಗೂ ರೋಣ ರಸ್ತೆಯಲ್ಲಿ ಟಾಯರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಸಿದರು. ಪಟ್ಟಣದ ವಾಣಿಜ್ಯ ಸಂಕೀರ್ಣಗಳು ಬಾಗಿಲು ಮುಚ್ಚಿದ್ದವು. ಎಪಿಎಂಸಿ, ಕಾಯಿಪಲ್ಲೆ ಮಾರುಕಟ್ಟೆ, ಹೂವಿನ ವ್ಯಾಪರಸ್ಥರು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಕೆಲವಡೆ ತೆರೆದಿದ್ದ ಅಂಗಡಿಮುಗ್ಗಟ್ಟು ಬಲವಂತವಾಗಿ ಸಂಘಟನಾಕಾರರು ಬಂದ್‍ಗೊಳಿಸಿದ ಪ್ರಸಂಗವೂ ಜರುಗಿತು. ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ವಾಯುವ್ಯ ಕರ್ನಾಟಕ ಸಾರಿಗೆ ಬಸ್‍ಗಳು ಬಂದ್ ಆಗಿದ್ದವು. ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ, ಪಟ್ಟಣದಲ್ಲಿ ಜನರಿಲ್ಲದೇ ಬಡಾವಣೆ, ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜು ಬಂದ್ ಆಗಿದ್ದವು.
ಕಜವೇ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣೆಗೆಯೂ ಬೆಳಗ್ಗೆ 11 ಘಂಟೆಗೆ ದುರ್ಗಾವೃತ್ತದಿಂದ ಆರಂಭಗೊಂಡು ಅಂಬೇಡ್ಕರ ವೃತ್ತ, ಶಿವಾಜಿ ವೃತ್ತದ ಮೂಲಕ ಕಾಲಕಾಲೇಶ್ವರ ವೃತ್ತದಲ್ಲಿ 1 ಘಂಟೆಗಳ ಕಾಲ ರಸ್ತೆ ತಡೆ ನಡೆಯಿಸಿ ಬಹಿರಂಗ ಭಾಷಣ ಮಾಡಿದರು. ಮೆರವಣಿಗೆ ಉದ್ದಕ್ಕೂ ಯೋಜನೆ ಜಾರಿಗೊಳಿಸುವಲ್ಲಿ ಎಡವಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಮೊಳಗಿದವು.
ಈ ಸಂದರ್ಭದಲ್ಲಿ ಕಜವೇ ರಾಜ್ಯಾಧ್ಯಕ್ಷ ಹೆಚ್.ಎಸ್. ಸೋಂಪೂರ ಮಾತನಾಡಿ, ಕಳೆದ 40 ವರ್ಷಗಳಿಂದ ನಡೆಯಿಸಿಕೊಂಡು ಬರುತ್ತಿರುವ ಹೋರಾಟಕ್ಕೆ ಸರ್ಕಾಗಳ ಇಚ್ಛಾಶಕ್ತಿಕೊರತೆಯಿಂದ ಯೋಜನೆ ನನೆಗುದಿಗೆ ಬಿಳುತ್ತಾ ಸಾಗಿದೆ. ಮಹದಾಯಿ ನದಿ ಜೋಡೆಣೆಯಾಗುವರೆಗೂ ಉತ್ತರಕರ್ನಾಟಕ ಜನತೆ ಹೋರಾಟ ನಿಲ್ಲಿಸುವುದಿಲ್ಲ. ಈ ಭಾಗದ ರೈತರು ಸಾಕಷ್ಟು ತಾಳ್ಮೆಯಿಂದ ಇದ್ದಾರೆ. ತಾಳ್ಮೆ ಪರೀಕ್ಷಿಸುವದು ಸರಿಯಲ್ಲ. ರೈತರು ರೊಚ್ಚಿಗೆದ್ದರೆ ಪರಸ್ಥಿತಿ ಬೇರೆಯೇ ಆಗಲಿದೆ. ಗೋವಾ ರಾಜ್ಯದಲ್ಲಿ 2 ಜನ ಸಂಸದರಿದ್ದಾರೆ. ಕರ್ನಾಟಕದಲ್ಲಿ 27 ಜನ ಸದಸ್ಯರಿದ್ದು, ಯೋಜನೆ ಅನುಷ್ಠಾನಕ್ಕೆ ಒಬ್ಬರೂ ರಾಜಿನಾಮೆ ನೀಡಿ, ಕೇಂದ್ರಕ್ಕೆ ಒತ್ತಡ ಹೇರದಿರುವುದು ನಿಜಕ್ಕೂ ಖೇಧಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮೋತಿಲಾಲಸಾ ಮಲಜಿ, ರಾಜು ಸಾಂಗ್ಲಿಕರ, ಕಳಕಪ್ಪ ಪೋತಾ, ವಿರೇಶ ಸಂಗಮದ, ಸಂಜೀವಕುಮಾರ ಜೋಶಿ, ಗುಲಾಮ ಹುನಗುಂದ, ಮುತ್ತು ತೊಂಡಿಹಾಳ, ಮುಖೇಶ ಪ್ರಜಾಪತಿ, ರವಿ ಗುಗ್ಗಲೋತ್ತರ ಸೇರಿದಂತೆ ಇತರರು ಇದ್ದರು.

loading...