ಬಸವ ಧರ್ಮ ಹಾಳು ಮಾಡಿದವರು ಸನಾತನರು

0
48
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಬಸವ ಧರ್ಮ ಹಾಳು ಮಾಡಿದವರು ಸನಾತನರು. ವೈದಿಕ ಸಂಪ್ರದಾಯದವರು ಬಸವಣ್ಣವರನ್ನ ಗಡಿಪಾರು ಮಾಡಿದರು. ಇವತ್ತು ಸನಾತರೆ ಧರ್ಮವನ್ನು ಹಾಳು ಮಾಡುತ್ತಿದ್ದಾರೆ. ವೈಚಾರಿಕತೆ ವೈಜ್ಞಾನಿಕ ದಿನಾಚರಣೆ ಆಗಬೇಕು ಎಂದು ಬೈಲೂರದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಸಂಚಾರಿ ಗುರುಬಸವ ಬಳಗದವರ ಸಹಯೋಗದಲ್ಲಿ ನಡೆದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದಿಕರು ಪೂಜಾರಿಗಳು ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಅವರಿಗೆ ದಿಕ್ಕಾರ. ಹಿಂದೂ ಧರ್ಮ ಮೂಡನಂಬಿಕೆಗಳಿಂದ ದೇಶದ ಜನರನ್ನು ಶೋಷಣೆ ಮಾಡುತ್ತಿದೆ. ಕೆಲ ಜನರು ಹೆದ್ದರಿಸುತ್ತಿದ್ದಾರೆ ಆದರೆ ಹೆದ್ದರೂ ಪ್ರಶ್ನೆ ಇಲ್ಲ. ಮಾಧ್ಯಮ ಎಂದರೆ ನ್ಯಾಯಾಂಗ ಕಾರ್ಯಾಂಗ ಮತ್ತು ಶಾಸಕಾಂಗ ನ್ಯಾಯ ಸಿಗದಿದ್ದಾಗ ನ್ಯಾಯ ಕೋಡಿಸುವುದು ಕೆಲಸ ಮಾಧ್ಯಮ ಮಿತ್ರರು ಮಾಡಬೇಕು ಆದರೆ ಕೆಲ ಮಾಧ್ಯಮದವರು ತಪ್ಪು ಮಾಡುತ್ತಿದ್ದಾರೆ. ಅರಿವಿನ ಪ್ರಜ್ಞೆ ಇಟ್ಟಕೊಂಡು ಪತ್ರಕರ್ತರು ಬರೆಯಬೇಕು. ಗುಡಿಗುಡಾರಗಳಲ್ಲಿ ಮಹಿಳೆಯರು ಸರದಿಸಾಲಿನಲ್ಲಿ ನಿಲ್ಲುವುದನ್ನು ಬಿಟ್ಟು ಗ್ರಂಥಾಲಯಗಳಲ್ಲಿ ಸರದಿ ಸಾಲಿನಲ್ಲಿ ನೀಲುವುದರಿಂದ ದೇಶ ಪ್ರಗತಿಯಾಗುವುದು. ಬಸವಣ್ಣ ಅಂತಹ ಸ್ವಾತಿಕರು ಇನ್ನೂ ಹುಟ್ಟಿಲ್ಲ. ಹಾಲು ನಾಶ ಮಾಡದೇ ಮಕ್ಕಳಿಗೆ ಹಿರಿಯರಿಗೆ ನೀಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯಾದ್ಯಂತ ಒಂದು ಸಾವಿರ ಸ್ಥಳಗಳಲ್ಲಿ ಏಕಕಾಲದಲ್ಲಿ ಬಸವ ಪಂಚಮಿ ಆಚರಣೆ ಮಾಡುತ್ತಿದೇವೆ. ನಮ್ಮ ಮಾನವ ಬಂಧುತ್ವ ವೇದಿಕೆ ಮಹಾನಾಯಕರಾದ ಬದ್ಧು, ಬಸವ ಮತ್ತು ಅಂಬೇಡ್ಕರ್ ಜಯಂತಿ ಮಾಡುತ್ತಾ ಸಮಾಜದಲ್ಲಿ ಮೂಡನಂಬಿಕೆ ತಡಿದ್ದು ಸಮಾಜ ಬದಲಾವಣೆ ಮಾಡಲು ಪ್ರಯತ್ನಿಸುತ್ತೇವೆ. ಈ ವೆರೆಗೂ ಸನಾತನ ಧರ್ಮದವರು ನಿಜವಾದ ವಿಚಾರಗಳನ್ನು ಬೆಳೆಯಲು ಬಿಟ್ಟಿಲ್ಲ. ಸಮಾಜ ಬದಲಾವಣೆಯಾಗಬೇಕಾದರೆ ಜನರೇ ಇಂತಹ ಅನಿಷ್ಟ ಪದ್ಧತಿ ಮೂಡನಂಬಿಕೆ ಬೀಡಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ ನೇಗಿನಹಾಳದ ಬಸವಸಿದ್ದಲಿಂಗಯ್ಯ ಸ್ವಾಮೀಜಿ ಮಾತನಾಡಿ, ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಳ್ಳುವುದು ಲಿಂಗಾಯತ ಧರ್ಮ. ಈ ಎರಡು ಸಂಘಟನೆಗಳು ನಾಗರ ಪಂಚಮಿಯನ್ನು ನೆಲಗಟ್ಟಿನಲ್ಲಿ ಆಚರಣೆ ಮಾಡುತ್ತಿದೆ. ಮೂಡನಂಬಿಕೆ ಹುಟ್ಟು ಹಾಕಿದವರು ಯಾರು ರಾಜ್ಯದ ಮಠಾದೀಶರು ಭಕ್ತರಿಗೆ ವೈದಿಕ ಪರಂಪರೆ ಹೇರಿದ್ದರೂ. ಇಂತಹ ವೈಚಾರಿಕ ತಳಹದಿ ಮೇಲೆ ಯಾವುದು ಸತ್ಯ ಯಾವುದು ಸುಳ್ಳು ಎಂಬುವುದನ್ನು ತಿಳಿಸಬೇಕು. ಮಠದಲ್ಲಿ ಪಂಚಾಂಗ, ದೇವರ ಹೇಳುವಂತಹದ್ದು ನಮ್ಮ ಸಂಸ್ಕ್ರತಿ ಅಲ್ಲ. ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯಬೇಕು. ಎಲ್ಲರೂ ಒಂದು ಎಂದು ಬಾಳಬೇಕು ಎಂದರು.
ಮಾಜಿ ವಿಧಾನ ಪರಿಷತ್ತ್ ಸದಸ್ಯ ವೀರಕುಮಾರ ಪಾಟೀಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ, ಕರ್ನಾಟಕ ಬಾಲ್ಯ ವಿಕಾಸ ನಿಗಮದ ಅಧ್ಯಕ್ಷೆ ಅಂಜಲಿ ನಿಂಬಾಳಕರ, ಬಿ.ಡಿ ಪಾಟೀಲ, ಮಹಾಂತೇಶ ತೋರನಗಟ್ಟಿ, ಸರಳಾ ಹಿರೇಕರ ಮತ್ತಿತರರು ಉಪಸ್ಥಿತರಿದ್ದರು.

loading...