ಬಿ.ಆರ್.ಯಾವಗಲ್ ಅವರಿಂದ ವಿವಿಧ ಕಾಮಗಾರಿಗಳ ಭೂಮಿ ಪೂಜೆ

0
38
loading...

ಕನ್ನಡಮ್ಮ ಸುದ್ದಿ-ರೋಣ: ಸರಕಾರವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ನೇರವಾಗಿ ರೈತರಿಗೆ ಮುಟ್ಟುವಂತೆ ಮಾಡುವಲ್ಲಿ ಶ್ರಮಿಸಿದ ಸರಕಾರವಾಗಿದೆ.ಇಂತಹ ಇನ್ನಷ್ಟು ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ವಿನಿಯೋಗಿಸಲು ಶ್ರಮ ವಹಿಸುತ್ತೇನೆ.ಇದಕ್ಕೆ ತಮ್ಮೆಲ್ಲರ ಸಹಕಾರ,ಪ್ರೀತಿ,ವಿಶ್ವಾಸವು ಅಷ್ಠೆ ಮುಖ್ಯವಾಗಿರುತ್ತದೆ.ಸರಕಾರವು ರೈತರ ಪರವಾಗಿಯೇ ಇದೆ.ಅದರಂತೆ ಅವರ ಸಾಲವನ್ನು ಕೂಡಾ ಮನ್ನಾ ಮಾಡಲಾಗಿದೆ.ಇದೊಂದು ಹೆಮ್ಮೆ ಮೂಢಿಸುವಂತಹ ಸಂಗತಿಯಾಗಿದೆ ಎಂದು ಬಿ.ಆರ್.ಯಾವಗಲ್ ಹೇಳಿದರು.
ಅವರು ರೋಣ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಜರುಗಿದ ವಿವಿಧ ಕಾಮಗಾರಿಗಳ ಹಾಗೂ ನೂತನ ಪದವಿ ಪೂರ್ವ ಕಾಲೇಜ್ ಕಟ್ಟಡದ ಶಿಲಾನ್ಯಾಸದ ಭೂಮಿಪೂಜೆಯನ್ನು ನೇರವೇರಿಸಿ,ಮಾತನಾಡಿದ ಅವರು ಸರಕಾರವು ರೈತರ ಶೇ.50ರಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ.ಇದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ.sಅನ್ನಭಾಗ್ಯ,ಕ್ಷೀರಭ್ಯಾಗ್ಯ ಯೋಜನೆ,ಕೃಷಿ ಭಾಗ್ಯ ಯೋಜನೆ ಇಂತಹ ಮಹತ್ವವಾದ ಯೋಜನೆಗಳನ್ನು ತರುವಲ್ಲಿ ಶ್ರಮಿಸಿದ ಸರಕಾರವಾಗಿದೆ.ನುಡಿದಂತೆ ಸರಕಾರವು ನಡೆದುಕೊಂಡಿದೆ ಎಂದರು. ನಂತರದಲ್ಲಿ ಮಾತನಾಡಿದ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲರು ಮಾತನಾಡಿ,ಹುಲ್ಲೂರು ಗ್ರಾಮದಲ್ಲಿ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿದ ಗ್ರಾಮವು ಇದಾಗಿದ್ದು,ಶಿಕ್ಷಣಕ್ಕಾಗಿ ತಮ್ಮ ಎರಡು ಎಕರೆ ಜಮೀನನ್ನು ನೀಡಿದ ವೆಂಕನಗೌಡ ಕೆಂಚನಗೌಡ್ರ ಕುಟುಂಬವು ನಿಜಕ್ಕೂ ಉದಾರ ಮನೋಭಾವನ್ನು ಹೊಂದಿದವರು.ಇಂದಿನ ದಿನಮಾನಗಳಲ್ಲಿ ಒಂದಿಂಚ್ಚನ್ನು ಭೂಮಿನ್ನು ನೀಡದ ಜನತೆಯೂ ಇಂದು ನಮ್ಮಲ್ಲುಂಟು.ಅಂತಹ ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಮಕ್ಕಳ ಭವಿಷ್ಯವನ್ನು ಅರಿತ ಆ ಕುಟುಂಬಕ್ಕೆ ನಾವು ಶುಭವನ್ನು ಕೋರುತ್ತೇವೆ ಎಂದರು. ಅದರಂತೆ ನೋಡಿದಂತೆ ನಡೆದ ಸರಕಾರವಾಗಿದೆ.ಪ್ರತಿಯೊಂದು ಯೋಜನೆಗಳು ನೇರವಾಗಿ ರೈತರನ್ನು ತಲುವಲ್ಲಿ ಯಶಸ್ವಿ ಸರಕಾವಾಗಿ ಹೊರಹೊಮ್ಮಿದೆ.ಸರಕಾರ ರಚನೆಯಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಅನೇಕ ಮಹತ್ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ ಎಂದರು. ಗುರುಪಾದ ಮಹಾಸ್ವಾಮೀಗಳು ಸಭೆಯನ್ನುದ್ದೆಶಿಸಿ ಆಶಿರ್ವಚನವನ್ನು ನೀಡಿದರು. ಶಿಕ್ಷಣಕ್ಕಾಗಿ ಭೂಮಿಯನ್ನು ದಾನಮಾಡಿದ ಸದಸ್ಯರಿಗೆ ಹಾಗೂ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ನರಗುಂದ ಮತಕ್ಷೇತ್ರದ ಶಾಸಕ ಬಿ.ಆರ್.ಯಾವಗಲ್,ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ,ಜಿಪಂ ಉಪಾಧ್ಯಕ್ಷಿನಿ ರೂಪಾ ಅಂಗಡಿ,ರಾಜುಗೌಡ ಪಾಟೀಲ,ಹನಮಂತಗೌಡ ಕೆಂಚನಗೌಡ್ರ,ಪರಶುರಾಮ ಅಳಗವಾಡಿ,ದಶರತ ಗಾಣಿಗೇರ,,ಶರಣಪ್ಪ ಗಾಣಿಗೇರ, ವ್ಹಿ.ಬಿ.ಸೋಮನಕಟ್ಟಿಮಠ,ಶಾಂತವ್ವ ಅಡ್ನೂರ,ವಜ್ರಪ್ಪ ಚಿಕ್ಕರಡ್ಡಿ,ಕಳಕನಗೌಡ ಲಿಂಗನಗೌಡ್ರ,ಮಲ್ಲಯ್ಯಜ್ಜ ಹಿರೇಮಠ,ಶಶಿಧರ ಹಟ್ಟಿ,ಸಿದ್ಧಣ್ಣ ಯಾಳಗಿ,ನಾಗರಾಜ,ಈರಣ್ಣ ಹುಣಸಿಕಟ್ಟಿ,ಎಸ್.ವಿ.ಮೆಣಸಗಿ,ದ್ಯಾಮನಗೌಡ ದಾನಪ್ಪಗೌಡ್ರ,ಹಾಗೂ ಗ್ರಾಪಂ ಸದಸ್ಯರು,ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

loading...