ಬೀಡುವಿಲ್ಲದ ಕೆಲಸದಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ

0
35
loading...

ರಾಮದುರ್ಗ: ಮನುಷ್ಯರಿಗೆ ಬೀಡುವಿಲ್ಲದ ಕೆಲಸದಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ ಆದ್ದರಿಂದ ಎಲ್ಲ ತಮ್ಮ ನಿತ್ಯ ಜೀವನದಲ್ಲಿ ಸ್ವಲ್ಪ ಸಮಯವಾದರೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವದರಿಂದ ಸಮಾನತೆಯ ಭಾವನೆ ಮೂಡುತ್ತದೆ ಎಂದು ಜೆಡಿಎಸ್ ಮುಖಂಡ ಪಿ.ಎಫ್. ಪಾಟೀಲ ಹೇಳಿದರು.
ತಾಲೂಕಿನ ಮುದೇನೂರ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ರೆಗಳು ಮನುಷ್ಯನಿಗೆ ಹೃದಯ ಶ್ರೀಮಂತಿಕೆಯನ್ನು ನೀಡಬಲ್ಲವು ಎಂದರು.
ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಆಧ್ಯಾತ್ಮವನ್ನು ಮರೆಯಬಾರದು. ವೈದ್ಯರು ತಾವು ನಡೆಸುವ ಪ್ರತಿಯೊಂದು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಮೇಲೂ ಭಗವಂತನಲ್ಲಿ ಪ್ರಾರ್ಥನೆ ಮಾಡುವುದು ವಿಜ್ಞಾನಕ್ಕಿಂತಲೂ ಆಧ್ಯಾತ್ಮವನ್ನು ನಂಬಿಕೊಂಡಿರುತ್ತಾರೆ ಎಂದು ಹೇಳಿದರು.
ಜೆಡಿಎಸ್ ನಾಯಕಿ ಶ್ರೀದೇವಿ ಮಾದನ್ನವರ, ಶಿಕ್ಷಕ ಎಸ್.ವಿ. ಕಲ್ಯಾಣಶೆಟ್ಟಿ, ಕೃಷಿಕ ಸಮಾಜದ ಅಧ್ಯಕ್ಷ ವೈ.ಎಚ್. ಪಾಟೀಲ, ಎಂ.ಬಿ. ಪಾಟೀಲ ಮಾತನಾಡಿದರು.
ಹರ್ಲಾಪೂರದ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುದೇನೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಲಮಾಣಿ, ಆರ್.ಡಿ. ಕಿತ್ತೂರ, ಸಂಗಪ್ಪ ಪರೀಟ, ಮುತ್ತಪ್ಪ ಚವಲಾರ, ಪುಂಡಲೀಕಪ್ಪ ಚೌಡಕಿ, ಇಮಾಮ್‍ಸಾಬ ಮುಜಾವರ, ದೇವೇಂದ್ರಪ್ಪ ಬಡಿಗೇರ ಉಪಸ್ಥಿತರಿದ್ದರು.
ಎಸ್.ಎನ್. ಚಿಗದಮ್ಮನವರ ಸ್ವಾಗತಿಸಿದರು. ಶಿವಾನಂದ ಉದಾನಶೆಟ್ಟಿ, ಅಶೋಕ ಹಕಾಟಿ ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ಹರಗುಟಗಿ ವಂದಿಸಿದರು.

loading...