ಬೆಳ್ಳಟ್ಟಿಯಲ್ಲಿ 20 ಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿ ವಶ

0
33
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಇಂದು ಪ್ಲಾಸ್ಟರ ಆಪ್ ಪ್ಯಾರೀಸ (ಪಿಒಪಿ) ಗಣೇಶ ಮೂರ್ತಿ ತಯಾರಕರಾದ ಮಲ್ಲೇಶಪ್ಪ ಕುಂಬಾರ ಇವರ ಮನೆಯ ಮೇಲೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗದಗ ಪರಿಸರ ಇಲಾಖೆಯ ಹಿರಿಯ ಅಧಿಕಾರಿ ಎಮ್.ವಿರೇಶ ಅವರು ಶಿರಹಟ್ಟಿ ತಹಶೀಲದಾರ ಎ ಡಿ. ಅಮರಾವದಗಿ ಇವರ ನೇತೃತ್ವದಲ್ಲಿ ಹಠಾತ ದಾಳಿ ನಡೆಸಿದರು.
ಶನಿವಾರ ಪಿಒಪಿ ಹಣೇಶನ ಮೂರ್ತಿ ಮಾಡುತ್ತಿದ್ದ ಸಮಯದಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಬಹು ದೊಡ್ಡ ಗಾತ್ರದ ಇಪ್ಪತ್ತಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ಳಟ್ಟಿ ಹೊರ ಪೆÇಲೀಸ ಠಾಣೆಯ ಹವಾಲ್ದಾರ ಪವಾಡಿ ಮತ್ತು ಸಿಬ್ಬಂದಿಗಳು ಹಾಗೂ ಪಿಡಿಒ ಆರ್.ವಾಯ್. ಸಂಜೀವ ಜಯಕರ್ನಾಟಕ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷ ಸಣ್ಣಯಲ್ಲಪ್ಪ ವಳಗೇರಿ, ಕಾರ್ಯದರ್ಶಿ ಮಂಜು ಕೊರವರ, ಮಂಜುನಾಥ ಕುಸಗೂರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳಾದ ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಶಿವನಗೌಡ ಪಾಟೀಲ, ಮದನಲಾಲ ಭಾಪಣಾ ಇದ್ದರು

loading...