ಬ್ಯಾಂಕ್‍ನಲ್ಲಿ ಹಾಡಹಗಲೇ 12 ಲಕ್ಷ ರೂ. ದರೋಡೆ

0
231
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ನಗರದ ಕೀರಲೋಸ್‍ಕರ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್‍ನಲ್ಲಿ ಐದು ಜನರು ತಂಡ ಹಾಡಹಗಲೇ 12ಲಕ್ಷ ರೂ. ಹಣ ದೊಚ್ಚಿಕೊಂಡ ಪರಾರಿಯಾದ ಘಟನೆ ಗುರುವಾರ ಬೆಳಗ್ಗೆ ನಡದಿದೆ.

ಐದು ಜನರ ತಂಡ ಬೆಳಗ್ಗೆ ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡುವ ನೆಪದಲ್ಲಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕ್ಯಾಶ್‍ರ ಹಿಂದಿರುವ ಹಣವನ್ನು ಸಿಬ್ಬಂದಿಗೆ ಗೊತ್ತಾಗದ ರೀತಿಯಲ್ಲಿ ಕಳ್ಳತನ ಮಾಡಿ ಖರ್ತನಾಕ್ ಕಳ್ಳರು ಪರಾರಿಯಾಗಿದ್ದಾರೆ.

ಕ್ಯಾಶ್‍ರ ಮತ್ತು ಸಿಬ್ಬಂದಿ ಮಾತ್ರ ಪ್ರವೇಶಕ್ಕೆ ಅವಕಾಶ ಇರುವ ಸ್ಥಳದಲ್ಲಿ ಹೋಗಿ ಬ್ಯಾಂಕ್ ಸಿಬ್ಬಂದಿಯಂತೆ ಹಣ ತೆಗೆದುಕೊಂಡು ಹೋಗಿರುವುದು ಮತ್ತು ಬೆಳಗ್ಗೆ 10.30ರ ಸುಮಾರಿಗೆ ಆದ ಘಟನೆ ಸಿಬ್ಬಂದಿಗೆ 12.30ಕ್ಕೆ ಹಣ ನೋಡಿದ್ದಾಗ ಕಳ್ಳತನವಾಗಿದ್ದು, ಗೋತ್ತಾಗಿರುವುದು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂಬುವುದು ತಿಳಿಯುತ್ತದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನ ಮಾಡಿರುವ ವ್ಯಕ್ತಿಗಳ ದೃಶ್ಯಗಳು ಸೆರೆಯಾಗಿವೆ. ಸಿಸಿಟಿವಿ ದೃಶ್ಯ ಪಡೆದುಕೊಂಡ ಪೊಲೀಸ್ ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಡಿಸಿಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಕಳ್ಳರ ಪತ್ತೆಗಾಗಿ ಕಾರ್ಯಚರಣೆಗೆ ತಂಡ ರಚನೆ ಮಾಡಿದ್ದಾರೆ. ಪೊಲೀಸ್‍ರು ಕಳ್ಳತನ ಮಾಡಿರುವ ವ್ಯಕ್ತಿಗಳು ತಮಿಳುನಾಡಿನವರು ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಎರಡನೇಯ ಮಹಡಿಯಲ್ಲಿದ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್‍ನ್ನು ನಾಲ್ಕು ದಿನಗಳ ಹಿಂದೆ ಕೆಳಮಹಡಿಗೆ ಸ್ಥಳಾಂತರ ಮಾಡಿದ್ದಾರೆ.

loading...