ಮಕ್ಕಳಿಗೆ ಉತ್ತಮ ಸಂಸ್ಕಾರಯುತವಾದ ಶಿಕ್ಷಣ ನೀಡಿ:ಶ್ರೀಗಳು

0
35
loading...

ರಾಮದುರ್ಗ: ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವದಕಿಂತ ಮಕ್ಕಳಿಗೆ ಉತ್ತಮ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಿದಾಗ ಮಾತ್ರ ತಮ್ಮ ಮಕ್ಕಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಕಿವಿ ಮಾತು ಹೇಳಿದರು.
ಪಟ್ಟಣದ ಮರಾಠಾ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಶನಿವಾರ ನಡೆದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿಯಲ್ಲಿ ಹೆಚ್ಚು ಅಂಕ 75 ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆರ್ಶಿವಚನದಲ್ಲಿ ಮಾತನಾಡಿದ ಅವರು, ತಮ್ಮನ್ನು ನಂಬಿ ಬಂದವರಿಗೆ ಅನ್ನದಾನ ಮಾಡಿ ರಕ್ಷಣೆ ನೀಡಿದ, ವೀರರಾಣಿ ಚೆನ್ನಮ್ಮಾಜಿಯಂತಹ ಶೌರ್ಯಯುತ ಸಮಾಜದ ಪಂಚಮಸಾಲಿ ಸಮುದಾಯ, ಕೆ.ಎಲ್.ಇ ಸೇರಿದಂತೆ ದೇಶದಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾದ ಸಮಾಜ ನಮ್ಮದು, ಸಮುದಾಯದ ಜನತೆ ಸಂಘಟಿತರಾದಾಗ ಮಾತ್ರ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಆಧ್ಯಕ್ಷ ಹಾಗೂ ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯನ್ನೆ ನಂಬಿಕೊಂಡು ಬದುಕುತ್ತಿರುವ ಸಮುದಾಯದ ಜನತೆ ಸತತ ಬರಗಾಲದಿಂದ ಬಡತನದಲ್ಲಿ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಮಾಜವನ್ನು 2ಎ ಗೆ ಸೇರ್ಪಡೆ ಮಾಡಬೇಕೆಂದು ಸರಕಾರವನ್ನು ಹಲವು ದಿನಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಮುಂಬರುವ ದಿನಗಳಲ್ಲಿ ಸಮುದಾಯದ ಜನತೆ ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ತಂದು ಸೌಲಭ್ಯಗಳನ್ನು ಪಡೆಯಲು ಹೋರಾಟದ ಹಾದಿ ತುಳಿಯಬೇಕಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ತಾಲೂಕಾ ಘಟಕದ ಅಧ್ಯಕ್ಷ ಮಾರುತಿ ಕೊಪ್ಪದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌಡಪ್ಪಗೌಡ ಪಾಟೀಲ, ಶ್ರೀದೇವಿ ಮಾದನ್ನವರ, ಎಂ. ಎಂ. ಹನಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಸಮಾಜದ ಮುಖಂಡರಾದ ಟಿ. ಪಿ. ಮುನೋಳಿ, ಪರ್ವತಗೌಡ ಪಾಟೀಲ, ಬಿ ಎಫ್. ಬಸಿಡೋಣಿ, ಐ. ಎಸ್. ಹರನಟ್ಟಿ, ಬಿ. ಎಸ್. ಬೆಳವಣಕಿ, ಗಂಗಪ್ಪ ಬೂದಿ, ಜಿ.ಪಂ ಸದಸ್ಯೆ ಶಿವಕ್ಕ ಬೆಳವಡಿ, ಮಹೇಶ ದೇಸಾಯಿ, ಮಹಾದೇವಪ್ಪ ಮದಕಟ್ಟಿ, ಮಲ್ಲಿಕಾರ್ಜುನ ಕೊಪ್ಪದ, ಪ್ರಶಾಂತಗೌಡ ಪಾಟೀಲ, ಜಿ. ವ್ಹಿ. ನಾಡಗೌಡ್ರ, ಮಹಾದೇವ ದಾನನ್ನವರ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಬಾಳಪ್ಪ ಹಂಜಿ, ಉಮೇಶ ಕೊಳವಿ, ಮಲ್ಲಿಕಾರ್ಜುನ ಪಾಟೀಲ, ಸೇರಿದಂತೆ ಇತರರಿದ್ದರು.
ಉಪನ್ಯಾಸಕ ಬಿ. ಬಿ. ಹರನಟ್ಟಿ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಎಂ. ಐನಾಪೂರ, ಉಪನ್ಯಾಸಕಿ ಸುಮಂಗಲಾ ಹೊಂಗಲ ನಿರೂಪಿಸಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ಮಂಜು ನವಲಗುಂದ ವಂದಿಸಿದರು.

loading...