ಮಕ್ಕಳ ಅಭಿವೃದ್ಧಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ

0
38
loading...

ಚನ್ನಮ್ಮ ಕಿತ್ತೂರು ಃ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯವಿದ್ದು ಈ ನಿಟ್ಟಿನಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಮೇಲೆಯೂ ಜವಾಬ್ದಾರಿ ಇದೆ ಎಂದು ರಾಷ್ಟ್ರ ಸಂತ 108 ಶ್ರೀ ಚಿನ್ಮಯಸಾಗರ ಮಹಾರಾಜರ ಜಂಗಲವಾಲೇ ಬಾಬಾ ಹೇಳಿದರು. ತಾಲೂಕಿನ ದೇಗಾಂವ-ಹೊನ್ನಾಪೂರ ಐತಿಹಾಸಿಕ ಅರಣ್ಯ ಚಾತುರ್ಮಾಸದಲ್ಲಿ ವಿದ್ಯಾರ್ಥಿಗಳಿಗೆ ಉದ್ಬೋದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಸಂಸ್ಕøತ, ಆದರ್ಶ ರಾಷ್ಟ್ರ ನಿರ್ಮಾಣವಾಗಲು ಬಾಲ್ಯಾವಸ್ಥೆಯಿಂದಲೇ ಮಕ್ಕಳಲ್ಲಿ ವೀರರು, ಶರಣ, ಸಂತರು ಮತ್ತು ಮಹಾತ್ಮರ ಆದರ್ಶಗಳನ್ನು ಮಕ್ಕಳ ಮನದಲ್ಲಿ ತುಂಬಬೇಕು. ಮಕ್ಕಳಿಗೆ ಪಶ್ಚಿಮಾತ್ಯ ಆಚರಣೆ ಬಿಟ್ಟು ಸಂಸ್ಕøತಿ ಹಾಗೂ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮ ಸಂಸ್ಕøತಿ ಪರಂಪರೆಯನ್ನು ಎತ್ತಿ ಹಿಡಿಯಬೇಕು ಆಗ ನಾವು ಜಗತ್ತಿಗೆ ಮಾದರಿಯಾಗುತ್ತೇವೆ. ಪರಿಸರ ಉತ್ತಮವಾಗಿದ್ದರೆ ಮಾತ್ರ ಬೆಳೆ, ಮಳೆ ಸೇರಿದಂತೆ ಮನುಷ್ಯರ ಆರೋಗ್ಯವು ಉತ್ತಮವಾಗಿರುತ್ತದೆ ಆದ್ದರಿಂದ ಪ್ರತಿಯೋಬ್ಬರು ಪರಿಸರದ ಬಗ್ಗೆರ ಕಾಳಜಿ ಎಂದು ಹೇಳಿದರು ಆರ್ಯಿಕಾರತ್ನ ಜೀನವಾಣಿ ಮಾತಾಜಿ ಮಾತನಾಡಿ, ಮುನಿಶ್ರೀಗಳು ಇಂದಿನ ಸಮಾಜ, ದೇಶ, ಜಗತ್ತು ಎದುರಿಸುತ್ತಿರುವ ಅಸಮಾನತೆ, ಅಸ್ಪøಶ್ಯತೆ, ಸ್ತ್ರೀ ಸಬಲೀಕರಣ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ. ಮಕ್ಕಳು ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಆದ್ಯತೆ ನೀಡಿ. ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕøತಿಯನ್ನು, ದೇಶಾಭಿಮಾನವನ್ನು ಮಕ್ಕಳು ಬೆಳಸಿಕೊಳ್ಳಬೇಕೆಂದು ಹೇಳಿದರು. ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ರಾಜ್ಯ ಹಾಗೂ ನೆರೆ ರಾಜ್ಯಗಳಾದ ಭಕ್ತ ಸಮೋಹವೆ ಹರಿದು ಬಂದಿತ್ತು. ವೇದಿಕೆ ಸಂಪೂರ್ಣ ತುಂಬಿದ ಪರಿಣಾಮ ಸಾವಿರಾರೂ ಭಕ್ತರು ನಿತ್ತಕೊಂಡೆ ಕಾರ್ಯಕ್ರಮ ವಿಕ್ಷಿಸಿದರು. ಭಕ್ತರ ಜಯಘೋಷ ಭಕ್ತಿ ಸಂಗಿತ ಕಾರ್ಯಕ್ರಮದಿಂದ ಭಕ್ತರು ಕುಣಿದು ಕುಪ್ಪಳಿಸಿ ಆನಂದ ಪಟ್ಟರು. ಚಿನ್ಮಯ ಸಾಗರ ಮಾಹಾರಾಜರ ಮಂಗಲವಾದ್ಯ ಮೇಳಗಳೊಂದಿಗೆ ಪ್ರವಚನ ವೇದಿಕೆಗೆ ಬಳಿಗೆ ಗೌರವ ಪೂರ್ವಕವಾಗಿ ಬರಮಾಡಿಕೊಂಡರು. ವೇದಿಕೆಯ ಮುಂದೆ ರಾಷ್ಟ್ರ ಧ್ವಜಾರೋಹಣ ಮಾಡಿ ವಿವಿಧ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಗೌರವ ವಂದನೆ ಸಲ್ಲಿಸಿದರು.. ಚಿನ್ಮಯ ಸಾಗರ ಚಾರಿಟೇಬಲ್ ಟ್ರಸ್ಟ್ರ ಛತ್ತೀಸ್‍ಗಡದ ಅಧ್ಯಕ್ಷೆ ಸುಮನಲತಾ ಪ್ರಕಾಶ ಮೋದಿ ಕಾರ್ಯಕ್ರಮದ ನೇತೃತ್ವವಹಿದ್ದರು. ಗ್ರಾಮ ಪಂಚಾಯತ ಸದಸ್ಯರು, ಅಧಿಕಾರಿಗಳು ಹಾಗೂ ಶಿಕ್ಷಕರು ಅತಿಥಿಗಳಾಗಿ ಪಾಲ್ಗೊಂಡಿದರು. ದೇವೆಂದ್ರ ಪಾಟೀಲ ನಿರೂಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಸಸಿಗಳನ್ನು ವಿತರಿಸಿ ಪರಿಸರ ಕಾಳಜಿ ಮೆರೆಯಲಾಯಿತು.

loading...