ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣವಿರಬೇಕು

0
23
loading...

ಮುಂಡರಗಿ: ಮನೆ, ಶಾಲೆ ಮತ್ತು ಸಮಾಜದ ಮಧ್ಯದಲ್ಲಿ ನಮ್ಮ ಮಕ್ಕಳು ಪ್ರತಿನಿತ್ಯ ವಿವಿಧ ಹಂತಗಳಲ್ಲಿ ವಿಕಾಸಗೊಳ್ಳುತ್ತಿರುತ್ತಾರೆ. ಅವರ ದೈಹಿಕ ಹಾಗೂ ಮಾನಸಿಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ವಾತಾವರಣವನ್ನು ನಾವೆಲ್ಲ ಸೃಷ್ಟಿಸಬೇಕು ಎಂದು ಕ್ಷೇತ್ರ ಸಂಪನ್ಮೂಕ ಕೇಂದ್ರದ ಸಮನ್ವಯಾಧಿಕಾರಿ ಶಂಕರ ಹಡಗಲಿ ಸಲಹೆ ನೀಡಿದರು.
ಭಾತರ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಘಟಕವು ಶುಕ್ರವಾರ ಸ್ಥಳೀಯ ಎಂಸಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಭಾತರ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲಮಾನಕ್ಕೆ ತಕ್ಕಂತೆ ಕಲಿಕೆಯ ಸ್ವರೂಪ ಇಂದು ಬದಲಾಗಿದ್ದು, ಪಠ್ಯೇತರ ಚಟುವಟಿಕೆಗಳು ಇಂದು ತುಂಬಾ ಮಹತ್ವ ಪಡೆದುಕೊಳ್ಳುತ್ತಿವೆ. ಅಂಕ ಗಳಿಕೆಯ ಜೊತೆಗೆ ಮಕ್ಕಳು ಇಂದು ಭಾತರ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‍ಸಿಸಿ, ಎನ್‍ಎಸ್‍ಎಸ್ ನಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕಿದೆ ಎಂದು ತಿಳಿಸಿದರು.
ಭಾತರ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಹೋಗುವ ಶಕ್ತಿಯನ್ನು ಶಿಕ್ಷಣ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಜಾತಿ ಬೇಧ ವಿಪರೀತವಾಗುತ್ತಿದ್ದು, ಮಕ್ಕಳಲ್ಲಿ ಜಾತಿ ಬೇಧವನ್ನು ತುಂಬುವಂತಹ ಚಟುವಟಿಕೆಗಳಿಂದ ಶಾಲಾ ಕಾಲೇಜುಗಳು ದೂರವಿರಬೇಕು ಎಂದು ತಿಳಿಸಿದರು.
ತಾಲ್ಲೂಕು ಪ್ರಾಥಮಿಕ ಶಿಕ್ಷರ ಸಂಘದ ಅಧ್ಯಕ್ಷ ಸಿ.ಜೆ.ಧರ್ಮಾಧಿಕಾರಿ ಮಾತನಾಡಿ, ಭಾತರ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಉಪಯುಕ್ತ ಚಟುವಚಟಿಕೆಗಳನ್ನು ಕೈಗೊಳ್ಳಲು ಸಾರ್ವಜನಿಕರು ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡರು. ಭಾತರ ಸ್ಕೌಟ್ಸ್ ಮತ್ತು ಗೈಡ್ಸ್‍ನ ಡಿಒಸಿ ಶಿವಕುಮಾರ ಭಾತರ ಸ್ಕೌಟ್ಸ್ ಮತ್ತು ಗೈಡ್ಸ್‍ನ ವಿವಿಧ ಹಂತಗಳ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು.
ಭಾತರ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕøತ ಶಿಕ್ಷಕ ಎಂ.ಜಿ.ಕಿತ್ತೂರ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ ಸಿರಬಡಗಿ, ಕಲಾವತಿ ಕುಷ್ಟಗಿ, ಎ.ಸಿ.ಕೆಳಗಿನಮನಿ ವೇದಿಕೆಯ ಮೇಲೆ ಹಾಜರಿದ್ದರು.
ಮುಖ್ಯಶಿಕ್ಷಕ ಎಂ.ಪಿ.ಶೀರನಹಳ್ಳಿ ಸರ್ವರನ್ನು ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ಇನಾಮತಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಚ್.ಸದರಬಾಯಿ ಕೊನೆಯಲ್ಲಿ ವಂದಿಸಿದರು.

loading...