ಮಟಕಾ ಆಡುತ್ತಿದ್ದ: ಮೂರರು ಬಂಧನ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ರಾಯಬಾಗ ತಾಲೂಕಿನ ಮೊರಬ ಮತ್ತು ಚಿಂಚಲಿ ಗ್ರಾಮದಲ್ಲಿ ಮಟಕಾ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸ್‍ರು ದಾಳಿಮಾಡಿ ಮೂರರನ್ನು ಬಂಧಿಸಿದ್ದಾರೆ.
ಮೊರಬ ಗ್ರಾಮದ ಮುತ್ತಪ್ಪ ರಂಗಪ್ಪ ಅಸೂದೆ, ಚಿಂಚಲಿ ಗ್ರಾಮದ ಅಜೀತ ಪರಶುರಾಮ ಕೋಳಿ ಮತ್ತು ಪ್ರಕಾಶ ಸದಾಶಿವ ಪಾಟೀಲ ಬಂಧಿತರು. ಇವರಿಂದ 2110 ರೂ. ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಡಚಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...