ಮಟಕಾ: ಐವರು ಬಂಧನ

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಿಲ್ಲೆಯ ಕುಡಚಿ ಮತ್ತು ಸವದತ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಟಕಾ ಆಡುತ್ತಿದ್ದ ಮಾಹಿತಿ ಪಡೆದ ಪೊಲೀಸ್‍ರು ದಾಳಿಮಾಡಿ ಐವರನ್ನು ಬಂಧಿಸಿದ್ದಾರೆ.
ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಪ್ರಕಾಶ ಸದಾಶಿವ ಪಾಟೀಲ, ಭರಮು ಕರೆಪ್ಪ ನಾಯ್ಕ, ಶಂಕರ ಶಿದ್ರಾಮ ಸಂಕ್ರಟ್ಟಿ ಮತ್ತು ಕರೆಪ್ಪ ಅಡಿವೆಪ್ಪ ಕೋನನ್ನವರ ಬಂಧಿಸಿ, 1530 ರೂ. ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವದತ್ತಿ ತಾಲೂಕಿನ ಮನಿಕಟ್ಟಿ ಗ್ರಾಮದ ಬುಡ್ಡೆಸಾಬ ಮೌಲಾಸಾಬ ಬಾವಕ್ಕನವರ ಬಂಧಿಸಿದ್ದಾರೆ. 9500 ರೂ. ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...