ಮಳೆಯ ರಭಸಕ್ಕೆ ಕೊಚ್ಚಿಹೋದ ಸೇತುವೆ: ಕಳಪೆ ಕಾಮಗಾರಿಯ ಆಗ್ರಹಿಸಿ ಮನವಿ

0
21
loading...

ಖಾನಾಪುರ: ತಾಲೂಕಿನಲ್ಲಿ ಕೆಲವು ರಾಜಕೀಯ ಮುಖಂಡರು ಅನಾಮಧೇಯ ಗುತ್ತಿಗೆದಾರರ ಹೆಸರಲ್ಲಿ ಲಕ್ಷಾಂತರ ಮೊತ್ತದ ಸರ್ಕಾರದ ಸಾರ್ವಜನಿಕ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಕಳಪೆ ಕಾಮಗಾರಿಯನ್ನು ಕೈಗೊಂಡಿದ್ದು, ಇದರ ಹಿಂದೆ ತಾಲೂಕಿನ ಕೆಲ ಪ್ರಭಾವಿಗಳ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಖಾನಾಪುರ ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಹೇಳಿದರು.
ಶುಕ್ರವಾರ ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕಿನಾದ್ಯಂತ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ ತನಿಖೆಗೆ ಆಗ್ರಹಿಸಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಗೋಲಿಹಳ್ಳಿಯಿಂದ ಬೀಡಿ ಗ್ರಾಮಕ್ಕೆ ಸಂಪರ್ಕಿಸುವ ತಟ್ಟೀಹಳ್ಳಕ್ಕೆ ಸೇತುವೆ ಕಂ ಬಂದಾರ್ ನಿರ್ಮಿಸುವ ಕಾಮಕಾರಿಯನ್ನು ನಿಯಮಾನುಸಾರ ಟೆಂಡರ್ ಕರೆಯದೇ ಕೈಗೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಅನುಭವ ಇಲ್ಲದ ವ್ಯಕ್ತಿ ಕಾಮಗಾರಿ ಕೈಗೊಂಡಿರುವ ಕಾರಣ ಜು.19ರಂದು ಸುರಿದ ಮಳೆಗೆ ಈಗಷ್ಟೇ ನಿರ್ಮಾಣವಾಗಿದ್ದ ಸೇತುವೆಯ ತಡೆಗೋಡೆ ಕುಸಿದು ನೀರಿನಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿದೆ ಇದೇ ರೀತಿ ಮಂಗೇನಕೊಪ್ಪ ಗ್ರಾಮದ ಹತ್ತಿರ ಮತ್ತೊಂದು ಸೇತುವೆಯ ಕಾಮಗಾರಿ ನಡೆಯುತ್ತಿದ್ದು ಅದು ಕೂಡ ಕಳಪೆ ಮಟ್ಟದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ಅಮಾಯಕರ ಜೀವನದಲ್ಲಿ ಹುಡುಗಾಟ ನಡೆಸುವ ತಪ್ಪಿಸ್ಥರರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ತಾಲೂಕಿನಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ನಡೆದ ಎಲ್ಲ ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತನಿಖೆ ಆಗಬೇಕು. ಮುಂದಿನ ಒಂದು ತಿಂಗಳ ಒಳಗಾಗಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವದು ಎಂದರು.
ಈ ಸಂದರ್ಭದಲ್ಲಿ ಹೈದರ ಶೇಕ್, ಗಂಗಾರಾಮ ವಡ್ಡರ, ವಿಜಯ ಕುಮಾರ ದೇಸಾಯಿ, ಶಾಂತಾರಾಮ ಹೆಬ್ಬಾಳಕರ, ಸುಬಾನಿ ದೇಶಪಾಂಡೆ, ಅಷ್ಪಾಕ ಮುಲ್ಲಾ, ಸಾಗರ ಕದಮ, ಶಿವಾಜಿ ಮಜಗಾಂವಕರ, ಸಂದೀಪ ಪಾಟೀಲ, ಆರ್,ಜಿ ಹಿರೇಮಠ ಸೇರಿದಂತೆ ಯುತ್ ಕಾಂಗ್ರೆಸ ಕಾರ್ಯಕರ್ತರು ಇದ್ದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ ಈ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಹೇಳಿದರು.

loading...