ಮಹದಾಯಿಗಾಗಿ ಧರಣಿ ನಡೆಸಿದ ರೈತರಿಂದ ಧರಂ ಸಿಂಗ್ ಅವರಿಗೆ ಶ್ರದ್ಧಾಂಜಲಿ

0
25
loading...

ಕನ್ನಡಮ್ಮ ಸುದ್ದಿ-ನರಗುಂದ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಮಹದಾಯಿಗಾಗಿ ಪಟ್ಟಣದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ರೈತರು ಶೃದ್ದಾಂಜಲಿ ಅರ್ಪಿಸಿದರಲ್ಲದೇ, 2016 ಜು. 28 ರಂದು ನಡೆದ ರೈತರ ಪ್ರತಿಭಟಣೆಯಲ್ಲಿ ಅನೇಕ ಅಮಾಯಕ ರೈತರನ್ನು ಥಳಿಸಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದರು.
ಶುಕ್ರವಾರ ಮಹದಾಯಿಗಾಗಿ ನಡೆದ ರೈತರ ಧರಣಿ 744 ನೇ ದಿನ ತಲುಪಿದ್ದು, 2016 ರ ಜು. 28 ರಂದು ಪೊಲೀಸರು ನರಗುಂದ ಮತ್ತು ನವಲಗುಂದ ಹಾಗೂ ಯಮನೂರ ಅಳಗವಾಡಿಗಳಲ್ಲಿ ನಡೆದ ಪ್ರತಿಭಟಣೆಯಲ್ಲಿ ಅಮಾಯಕರ ಮೇಲೆ ಲಾಠಿಯಿಂದ ಥಳಿಸಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿರುವುದು ಇಂದಿಗೆ ಒಂದು ವರ್ಷವಾಯಿತು. ರೈತರ ಮೇಲಿನ ಕೇಸ್‍ಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದ ರಾಜ್ಯ ಸರ್ಕಾರ ತಾನು ನೀಡಿದ ಭರವಸೆ ಮರೆತು ಅನೇಕ ರೈತರ ಮೇಲೆ ಸಮನ್ಸ್ ಜಾರಿಗೊಳಿಸಿ ಅಲೆಯುವಂತೆ ಮಾಡಿದೆ. ಅಮಾಯಕರನ್ನು ಥಳಿಸಿದ ಪೊಲೀಸರ ಮೇಲೆ ಯಾವುದೇ ಕ್ರಮ ಸರ್ಕಾರ ಕೈಗೊಂಡಿಲ್ಲ. ಇಂತಹ ಸರ್ಕಾರಗಳಿಂದ ರೈತರಿಗೆ ಯಾವ ಲಾಭವೂ ಇಲ್ಲವೆಂದು ಅನೇಕ ರೈತ ಮುಖಂಡರು ತಮ್ಮ ಭಾಷಣದಲ್ಲಿ ಟೀಕೆಮಾಡಿದರು.
ರೈತ ಮುಖಂಡ ಚಂದ್ರಗೌಡ ಪಾಟೀಲ ಮಾತನಾಡಿ, ರೈತರು ಮುಂಗಾರು ಬೆಳೆವಿಮೆ ಪಾವತಿಸಲು ಜು. 30 ಕೊನೆ ದಿನವಾಗಿ ಘೋಷಿಸಲಾಗಿದೆ. ಆ. 20 ರವರೆಗೆ ಬೆಳೆವಿಮೆ ಪಾವತಿ ಗಡುವನ್ನು ವಿಸ್ತರಿಸಭೇಕು. ಸಧ್ಯದ ಸ್ಥಿತಿಯಲ್ಲಿ ಸೊಸಾಯಿಟಿಗಳು ಬೆಳೆವಿಮೆ ಕಂತು ಪಾವತಿಸಿಕೊಳ್ಳಲು ಮೇಲಾಧಿಕಾರಿಗಳಿಂದ ಯಾವುದೇ ಆದೇಶಬಂದಿಲ್ಲವೆಂದು ತಿಳಿಸುತಿದ್ದಾರೆ. ಕೆಸಿಸಿ ಕೇಂದ್ರ ಬ್ಯಾಂಕ್‍ನವರು ಮುಖ್ಯ ಕಚೇರಿಗೆ ಬಂದು ಬೆಳೆವಿಮೆ ಪಾವತಿಮಾಡಿಕೊಳ್ಳಿ ಎಂದು ರೈತರಿಗೆ ತಿಳಿಸುತ್ತಿರುವುದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸಿ ಬೆಳೆವಿಮೆ ಪಾವತಿಮಾಡಿಕೊಳ್ಳಲು ತೊಂದರೆಬಾರದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಸರದಿ ಉಪವಾಸ ಸತ್ಯಾಗ್ರಹದಲ್ಲಿ ಶುಕ್ರವಾರ ದೇಸಾಯಿ ಗಲ್ಲಿಯ ಸಂಗಪ್ಪ ಪಾರ್ವತಿಯವರ, ಚನ್ನಪ್ಪ ಪಾರ್ವತಿಯವರ, ನಿಂಗಪ್ಪ ಬಜಾರದ, ಗದಿಗೆಪ್ಪ ಪಟ್ಟಣ, ವಿಠಲ ಪಟ್ಟಣ, ಸಿದ್ದಪ್ಪ ಜಂಬಗಿ, ಸುಭಾಷ್ ಕಟಗಿ, ವೀರಪ್ಪ ಪೇಠೆ, ಮುದ್ದಪ್ಪ ದಿವಟರ, ಇಸ್ಮಾಯಿಲ್ ಕಡ್ಡೇಗಾರ, ಬಸ್ಸು ದಿವಟರ, ಬಸಯ್ಯ ಮಠಪತಿ ಭಾಗವಹಿಸಿದ್ದರು.
ಧರಣಿಯಲ್ಲಿ ರಾಘವೇಂದ್ರ ಗುಜಮವಾಗಡಿ, ವಿಠಲ ಜಾಧವ, ರಮೇಶ ನಾಯ್ಕರ್, ಈರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ವೆಂಕಪ್ಪ ಹುಜರತ್ತಿ, ಚನ್ನಪ್ಪಗೌಡ ಪಾಟೀಲ, ನಾಗರತ್ನಾ ಸವಳಬಾವಿ. ಅನಸವ್ವ ಶಿಂಧೆ, ಚನ್ನಮ್ಮ ಕರ್ಜಗಿ, ಬಸಮ್ಮ ಐನಾಪುರ, ಯಲ್ಲವ್ವ ಸವದತ್ತಿ ಅನೇಕ ರೈತರು ಉಪಸ್ಥಿತರಿದ್ದರು.

loading...