ಮಹದಾಯಿ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ: ಶಾಸಕ ಯಾವಗಲ್

0
32
loading...

ಕನ್ನಡಮ್ಮ ಸುದ್ದಿ-ನರಗುಂದ: ಮಹದಾಯಿ ನದಿ ನೀರಿನ ಜೋಡಣೆಗಾಗಿ ನಾನು ಸಹ ಕಳೆದ 20 ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಮಹದಾಯಿ ನದಿ ನೀರಿನ ಯೋಜನೆಯೇ ಶಾಸ್ವತವೆಂದು ನಾನು ಆಗಲೂ ಪ್ರತಿಪಾಧಿಸಿದ್ದೆ ಈಗಲೂ ನನ್ನ ನಿಲುವ ಅದೇ ಆಗಿದೆ ಎಂದು ಶಾಸಕ ಬಿ.ಆರ್. ಯಾವಗಲ್ ತಿಳಿಸಿದರು.
ಶುಕ್ರವಾರ ರೈತ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ವೀರಗಲ್ಲಿಗೆ ಶೃದ್ದಾಂಜಲಿ ಸಲ್ಲಿಸಲು ಅಗಮಿಸಿದ್ದ ಅವರು ಶೃದ್ದಾಂಜಲಿ ನಂತರ ಹಳೇ ತಹಸೀಲ್ದಾರ ಕಚೇರಿ ಆವರಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಮಹದಾಯಿ ನದಿ ನೀರು ಉತ್ತರ ಕರ್ನಾಟಕದ ರೈತರಿಗೆ ಆಗತ್ಯವಾಗಿ ಬೇಕಾಗಿದೆ. ಮೂರು ವರ್ಷಗಳಿಂದ ಸರಿಯಾಗಿ ಮಳೆಬಾರದೇ ರೈತರು ತೊಂದರೆಯಲ್ಲಿದ್ದಾರೆ. ಮೇ ಅವಧಿಯಲ್ಲಿ ಮುಖ್ಯಮಂತ್ರಿಗಳು ಪತ್ರ ಬರೆದು ಮಹದಾಯಿ ಕುರಿತು ಸಭೆ ನಡೆಸಲು ದಿನ ನಿಗಧಿಪಡಿಸಿ ಎಂದು ಗೋವಾ ಹಾಗೂ ಮಹರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೆ ಈ ಮೊದಲು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಒಪ್ಪಿಕೊಂಡಿದ್ದರು. ಅಲ್ಲಿಯ ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿ ಮನೋಹರ್ ಪರಿಕರ್ ಇದೀಗ ಬೇರೆ ರಾಗ ಹಾಡಿ ಮಹದಾಯಿಗಾಗಿ ನ್ಯಾಯಮಂಡಳಿ ನೀಡುವ ಆಧೇಶಕ್ಕೆ ಮಾತ್ರ ನಮ್ಮ ಗೌರವವಿದೆ ಎಂದು ತಿಳಿಸಿದ್ದಾರಲ್ಲದೇ, ಕರ್ನಾಟಕ ಮಹದಾಯಿ ನದಿ ನೀರಿನ ವಿಷಯದಲ್ಲಿ ಡರ್ಟಿ ರಾಜಕೀಯ ಮಾಡುತ್ತಿದೆ ಎಂದು ಗೊವಾ ನೀರಾವರಿ ಸಚಿವರು ಕರ್ನಾಟಕದ ಬಗ್ಗೆ ಹಗುರವಾಗಿಯೂ ಮಾತನಾಡಿದ್ದಾರೆ, ಈ ಮಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರಲ್ಲದೇ, ಪ್ರಧಾನಿ ಮೋದಿಯವರು ಮಹದಾಯಿ ವಿವಾದ ಇತ್ಯರ್ಥಕ್ಕಾಗಿ ಮೂರು ರಾಜ್ಯಗಳ ಸಭೆ ಕರೆಯಲು ತೀರ್ಮಾಣಿಸಿ ಇದಕ್ಕೊಂದು ಅಂತಿಮ ರೂಪ ನೀಡಬೇಕಿದೆ. ರಾಜ್ಯದ ಸಂಸದರು ಸಹ ಮಹದಾಯಿ ನೀರಿನ ಸಮಸ್ಯೆ ಕುರಿತು ಪ್ರಧಾನಿಗಳ ಬಳಿ ಚರ್ಚಿಸಿ ಈ ಯೋಜನೆ ಅನುಷ್ಟಾನಗೊಳಿಸಲು ಶ್ರಮಿಸಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಸದಸ್ಯ ಎಸ್.ಡಿ. ಕೊಳ್ಳಿಯವರ, ಶಿವಸದುಗೌಡ ಪಾಟೀಲ ಮಾತನಾಡಿದರು. ಇದಕ್ಕೂ ಪೂರ್ವ 1980 ರಲ್ಲಿ ರೈತ ಬಂಡಾಯದಲ್ಲಿ ಮಡಿದ ವೀರಪ್ಪ ಕಡ್ಲಿಕೊಪ್ಪ, ಮಹದಾಯಿಗಾಗಿ ಈಗಿನ ಸಂದರ್ಭದಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿ ಈಚೆಗೆ ನಿಧನಹೊಂದಿದ ಧರ್ಮಣ್ಣ ತಹಸೀಲ್ದಾರ, ಶಿವಯ್ಯ ಪೂಜಾರ, ಚಿತ್ತರಂಜನ್, ಹಿರಿಯ ರೈತ ಮುಖಂಡರಾದ ಬಸಪ್ಪ ಸಾಲೂಟಗಿ, ಬಿ.ಸಿ. ಬ್ಯಾಳಿ ಅವರ ಸ್ಮರಣಾರ್ಥ ಸಭೆಯಲ್ಲಿ ಶೃದ್ದಾಂಜಲಿ ಅರ್ಪಿಸಲಾಯಿತು.
ಸಾರ್ವಜನಿಕ ಸಭೆ ನಡೆಸುವ ಪೂರ್ವ ಮಹದಾಯಿಗಾಗಿ ನಡೆದ ಧರಣಿಯಲ್ಲಿ ನೀರಿಗಾಗಿ 6 ನೇ ದಿನದಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ವಿರೇಶಸ್ವಾಮಿ ಸೊಬರದಮಠ ಅವರ ಬಳಿಗೆ ತೆರಳಿ ಯೋಗಕ್ಷೇಮ ವಿಚಾರಿಸಿದ ಯಾವಗಲ್ ಅವರು. ಉಪವಾಸ ಕೈಬಿಡಿ, ನಾವೆಲ್ಲ ಸೇರಿ ಸರ್ಕಾರಗಳಿಗೆ ಆಗ್ರಹಿಸೋಣ, ಉಪವಾಸದಿಂದ ದೈಹಿಕವಾಗಿ ಬಳಲುವುದು ಬೇಡವೆಂದು ತಿಳಿಸಿದರು.
ಸೊಬರದ ಮಠ ಅವರು ಈ ಭಾಗದ ಸಂಸದರನ್ನು ನೀವು ಒಂದಡೆಸೇರಿಸಿ ಮಹದಾಯಿಗಾಗಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಪ್ರಧಾನಿಗಳ ಬಳಿ ಹೋಗಿ ಮಹದಾಯಿ ಅನುಷ್ಟಾನಕ್ಕಾಗಿ ಒತ್ತಾಯಿಸಿ, ನಂತರ ಉಪವಾಸ ಕೈಬಿಡುವುದನ್ನು ತೀರ್ಮಾಣಿಸೋಣವೆಂದು ತಿಳಿಸಿದರು. ಈ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ಯಾವಗಲ್ ಭರವಸೆ ನೀಡಿದರು.
ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ದುರೀಣರಾದ ರಾಜು ಕಲಾಲ, ಚಂಬಣ್ಣ ವಾಳದ, ಸಿ.ಬಿ. ಪಾಟೀಲ, ಬಸಪ್ಪ ಸವದತ್ತಿ, ವಿಠಲ ಶಿಂಧೆ, ದೇಸಾಯಿಗೌಡ ಪಾಟೀಲ, ಎಂ.ಎಚ್. ತಿಮ್ಮನಗೌಡ್ರ, ಎಂ.ಎಸ್. ಅರಹುಣಸಿ, ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ಎಸ್.ಆರ್. ಪಾಟೀಲ ಅನೇಕ ಮುಖಂಡರು ಭಾಗವಹಿದ್ದರು.

loading...