ಮಾದಕ ವ್ಯಸನ, ರ್ಯಾಗಿಂಗ್‍ಗೆ ಯುವಶಕ್ತಿ ಬಲಿ: ನ್ಯಾ.ಯೋಗೇಶ

0
40
loading...

 

ಸವದತಿ:್ತ 16 ರ್ಯಾಗಿಂಗ್ ಒಂದು ಪಾಶ್ಚಿಮಾತ್ಯದಿಂದ ಬಂದಂತಹ ಪದವಾಗಿದೆ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದಾಗಲಿ, ಸನ್ನೆ ಮಾಡುವುದು, ಚಿತ್ರ ಬಿಡಿಸುವುದು, ಬೆದರಿಕೆ ಹಾಕುವುದು, ರಸ್ತೆಗಳಲ್ಲಿ ಅಡ್ಡ ಹಾಕುವುದು ಮುಂತಾದವು ರ್ಯಾಗಿಂಗ್‍ಗಳಿಗೆ ಉದಾಹರಣೆಗಳಾಗಿವೆ. ಭಾರತದ ದಂಡ ಸಂಹಿತೆಯ ಪ್ರಕಾರ ರ್ಯಾಗಿಂಗ್ ಮಾಡುವವರಿಗೆ ಹಾಗೂ ಅವರಿಗೆ ಸಹಾಯ ಮಾಡುವವರಿಗೆ ಕಾನೂನಿನಲ್ಲಿ ಅನೇಕ ತೆರನಾದ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಇದನ್ನು ತಡೆಯಲೆಂದೆ ಯು.ಜಿ.ಸಿ ಯವರು ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅದರಂತೆ ಆಂಟಿ ರ್ಯಾಗಿಂಗ್ ಬೋರ್ಡಗಳನ್ನು ರಚಿಸಲು ಅಧಿಕಾರ ನೀಡಲಾಗಿದೆ ಎಂಬುದನ್ನು ವಿವರವಾಗಿ ಹೇಳಿದರು. ಮತ್ತು ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿಯೂ ಡ್ರಗ್ ಪ್ರಮಾಣ ಇರುತ್ತದೆ, ಆದರೆ ಧೂಮ್ರಪಾನ, ಮದ್ಯಪಾನ ಗುಟಕಾ ಅಗೆಯುವುದು, ಗಾಂಜಾ, ಅಫೀಮು ಮುಂತಾದವು ವಿನಾಶಕಾರಿಯಾದ ವಸ್ತುಗಳಾಗಿದ್ದು, ಅವುಗಳು ನಮ್ಮ ಆರೋಗ್ಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುವಂತ ವಸ್ತುಗಳಾಗಿವೆ ಆದ್ದರಿಂದ ಅವುಗಳನ್ನು ತ್ಯಜಿಸುವುದು ಉತ್ತಮ ಎಂದು ನ್ಯಾಯಾಧೀಶ ಪಿ.ಆರ್ ಯೋಗೇಶರವರು ಹೇಳಿದರು.
ಅವರು ಜಿ.ಜಿ.ಚೋಪ್ರಾ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ “ಮಾದಕ ವ್ಯಸನ ಹಾಗೂ ರ್ಯಾಗಿಂಗ್‍ಗೆ ಯುವಶಕ್ತಿ ಬಲಿ” ಎಂಬ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ನ್ಯಾಯವಾದಿ ಸಂಘದ ಎಮ್.ಜಿ.ವಟ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡ್ರಗ್ ಒಂದು ಸಿಂಥಟೆಕ್ ಪದಾರ್ಥ ದೇಹದೋಳಗೆ ನೇರವಾಗಿ ಯಾವುದೇ ರಿತಿಯಲ್ಲಿ ಸಂಪರ್ಕ ಒದಗಿಸಿದಾಗ ಅಂತಹ ಪಧಾರ್ಥಗಳಿಗೆ ಡ್ರಗ್ಸ್ ವಸ್ತುಗಳೆಂದು ಕರೆಯಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕ ಮಕ್ಕಳು, ವಯಸ್ಕರು ಹಾಗೂ ಕಾಲೇಜಿನ ವಿಧ್ಯಾರ್ಥಗಳು ಮುಂತಾದವರು ಸಿನಿಮಾ ಹಾಗೂ ಇನ್ನಿಡರ ಸನ್ನಿವೇಶಗಳನ್ನು ನೋಡಿ ಅದರಂತೆ ತಾವು ಕೇವಲ ಟೇಸ್ಟ್ ಮಾಡಲು ಹೋಗಿ ಡ್ರಗ್ ವ್ಯಸನರಾಗುತ್ತಿದ್ದಾರೆ ಎಮಬುದನ್ನು ಉದಾಹರನೆ ಸಮೇತವಾಗಿ ವಿವರಿಸಿದರು. ಹಾಗೂ ಡ್ರಗ್ಸ್ ಉಪಯೋಗದಿಂದ ದೇಹದಲ್ಲಿ ಆಗುವ ಹಿಮೋಗ್ಲೋಬಿನ ಕೊರತೆಯಿಂದಾಗಿ ಅನೇಕ ರೋಗಗಳು ಉಂಟಾಗುತ್ತವೆ. ಇದರಿಂದ ಎಲ್ಲರೂ ಮಾದಕ ವಸ್ತುಗಳನ್ನು ತ್ಯಜಿಸಿ ಹಾಗೂ ತ್ಯಜಿಸಲು ಸಹಾಯ ಮಾಡಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳಾದ ಎಮ್.ಎಸ್.ವಂಟಮುರಿ, ಎ.ಎಸ್.ಲಚ್ಚಮನಾಯ್ಕರ, ಎಸ್.ಎಚ್.ಜಾಲಿಕೊಪ್ಪ, ಎನ್.ಎಸ್.ವಂಟಮುರಿ, ಆರ್.ಪಿ.ತೋಟಗಿ, ಹಾಗೂ ಕಾಲೇಜಿನ ಪ್ರಾಚಾರ್ಯರಾದ ಆರ್.ಬಿ.ಅಕ್ಕಣ್ಣವರ ರವರು ಉಪಸ್ಥಿತರಿದ್ದರು.
ನ್ಯಾಯವಾದಿಗಳಾದ ಸಿ.ಜಿ.ಮಲಗೌಡರ ಉಪನ್ಯಾಸಕರಾಗಿ ಮಾತನಾಡುತ್ತಾ ಓಆPS ಂಛಿಣ ಪ್ರಕಾರ ಡ್ರಗ್ ವ್ಯಸನರಾಗಿರುವ ವ್ಯಕಿಗಳ ಬಗ್ಗೆ ತಿಳುವಳಿಕೆ ನೀಡುತ್ತಾ ಹಾನಿಕಾರಕ ಹಾಗೂ ನಶೆಯ ಪದಾರ್ಥಗಳ ಬಗ್ಗೆ ಎಚ್ಚರಿಕೆ ನೀಡಿದರು. ಆಧುನಿಕ ಜೀವನದ ಶೈಲಿಯಿಂದಾಗಿ ಅತಿಯಾಗಿ ಮಾದಕ ವಸ್ತುಗಳ ಬಳಕೆಯಾಗುತ್ತಿದೆ ಅದರಲ್ಲಿ ಚಿಕ್ಕ ಮಕ್ಕಳು, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ 7 ಕೋಟಿ ಜನರು ಮಾದಕ ವಸ್ತುಗಳ ಬಳಕೆ ಡ್ರಗ್ ಂbuse ಗೆ ಬಲಿಯಾಗುತ್ತಿದ್ದಾರೆ. ಅದರಲ್ಲಿ ಶೇಕಡಾ 17 ರಷ್ಟು ಜನ ಂಜಜiಛಿಣ ಆಗಿದ್ದಾರೆ. ಎಂದು ಹೇಳಿದರು. ಸಂವಿಧಾನದ ಅನುಚ್ಚೇದ 47 ರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗುರುಪಾದ ಯಕ್ಕುಂಡಿ, ಸ್ವಾಗತಸಿದರು ನಿರೂಪಣೆ ಮತ್ತು ಎಸ್.ಬಿ.ಕಿವಡಿ ವಂದನಾರ್ಪಣೆ ಮಾಡಿದರು.

loading...