ಮೂಲಸೌಕರ್ಯ ಕೊರತೆ ಇದ್ದರೆ ಅಧಿಕಾರಿಗಳನ್ನು ಸಂಪರ್ಕಿಸಿ

0
40
loading...

ಚನ್ನಮ್ಮ ಕಿತ್ತೂರು : ಕಿತ್ತೂರು ಮತಕ್ಷೇತ್ರದ ವ್ಯಾಪ್ತಿಯಲ್ಲಿ 7 ಶಕ್ತಿ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದ್ದು 204 ಭೂತ್‍ಗಳನ್ನು ಮಾಡಲಾಗಿದ್ದು ಪದಾಧಿಕಾರಿಗಳು ಎಲ್ಲ ಗ್ರಾಮಗಳ ಮೂಲಸೌಕರ್ಯಗಳ ಕೊರತೆ ಏನೇ ಸಮಸ್ಯಗಳಿದ್ದರೂ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಕ್ಷೇತ್ರ ವಿಸ್ತಾರಕ, ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಹೇಳಿದರು.
ಪಟ್ಟಣದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತಕೇರಿ ಹಾಗೂ ಮಹಿಳಾ ಸಂಘ ಜೊತೆಗೆ ಚರ್ಚಿಸಿ ಅವರ ಸಮಸ್ಯಗಳನ್ನು ಪಟ್ಟಿ ಪರಿಹರಿಸುವ ಕಾರ್ಯ ನಡೆದಿದೆ. ಪ್ರತಿಯೊಂದು ಹಳ್ಳಿ ಹಾಗೂ ಮನೆಗಳಿಂದ ಮಾಹಿತಿ ಕಲೆ ಕಾರ್ಯ ಈಗಾಗಲೇ ನಡೆಯುತ್ತಿದೆ ಹಾಗೂ ಪ್ರತಿಯೋಂದು ಭೂತಮಟ್ಟದ ಮತದಾರರಿಗೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಯಾವೋಬ್ಬ ಮತದಾರನ ಹೆಸರನ್ನು ಪಟ್ಟಿಯಿಂದ ಕೈಬಿಡದಂತೆ ಕಾರ್ಯನಿರ್ವಹಿಸಲಾಗುವುದು ಎಂದರು.
ಮಾಜಿ ಶಾಸಕ ಸುರೇಶ ಮಾರಿಹಾಳ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಕ್ಷೇತ್ರದಲ್ಲಿ ಮಾಡಲಾಗುತ್ತಿದೆ ಪಂ. ದೀನ ದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಕಾರ್ಯಗಳ ವಿಸ್ತರಣೆಯನ್ನು ಮಾಡಲಾಗುತಿದ್ದು ಕೇಂದ್ರದ ಯೋಜನೆಗಳು ಪ್ರತಿಯೊಂದು ಹಳ್ಳಿಗಳಿಗೂ ಹಾಗೂ ಮನೆ, ಮನೆಗಳಿಗೂ ಮುಟ್ಟಸುವ ಕೆಲಸವಾಗಬೇಕಾಗಿದೆ ಈ ನಿಟ್ಟಿನಲ್ಲಿ ರಾಷ್ಟ್ರಾಧ್ಯಕ್ಷ ಅಮೀತ ಷಾ ರವರ ಮಾರ್ಗದರ್ಶನದಂತೆ ವಿಸ್ತಾರಕರ ಜೊತೆಗೂಡಿ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲಾ ಗ್ರಾಮೀಣ ಭಾಗದಲ್ಲಿ 8 ಮತಕ್ಷೇತ್ರಗಳಿದ್ದು ಕ್ಷೇತ್ರಾನುಸಾರವಾಗಿ 1000 ಬೂತ್‍ಗಳಲ್ಲಿ ಕಾರ್ಯಕರ್ತರ ಪಡೆ ಕೆಲಸ ಆರಂಭಿಸಿದೆ, ಇನ್ನೂಳಿದ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇನ್ನೂ 1000 ಬೂತ್ ಗಳನ್ನು ತೆರೆಯಲಾಗುವುದೆಂದು ಹೇಳಿದ ಅವರು, ಪ್ರತಿದಿನ ಪ್ರತಿಯೊಂದು ಬೂತ್‍ನ ಮಟ್ಟದಲ್ಲಿ ದಿನಕ್ಕೆ 25 ಮನೆಗಳಿಗೆ ತೆರಳಿ ಸಮಸ್ಯೆಗಳ ಪಟ್ಟಿ ತಯಾರಿಸಲಾಗುವುದು ಹಾಗೂ ಪ್ರತಿಯೊಂದು ಭೂತನಿಂದಲೂ ದಿನನಿತ್ಯ ಮಾಹಿತಿ ಪಡೆದುಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿದ್ದೆವೆಂದು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳು ಜಾರಿಗೆ ಬಂದಿದ್ದರೂ ಅದರ ಬಗ್ಗೆ ಮಾಹಿತಿ ದೊರೆಯದೆ ಗ್ರಾಮೀಣರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಪ್ರತಿಯೊಬ್ಬರಿಗೂ ಕೇಂದ್ರದ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟು ಯೋಜನೆಯ ಸಸುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿಕೊಡಲಾಗುವುದು ಹಾಗಯೇ ಬೆಳೆ ವಿಮಾ ತುಂಬಲು ಜುಲೈ 15ಕ್ಕೆ ಕೊನೆಯ ದಿನಾಂಕವಾಗಿರುವದರಿಂದ ರೈತರಿಗೆ ತೊಂದರೆಯಾಗುತ್ತಿದೆ ಆದ ಕಾರಣ ಬೆಳೆ ವಿಮಾತುಂಬಲು ಇನ್ನೂ ಕಾಲ ವಿಸ್ತರಣೆ ಮಾಡುವಂತೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದೆಂದು ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಸಿ.ಆರ್.ಪಾಟೀಲ, ಡಾ. ಬಸವರಾಜ ಪರವಣ್ಣವರ, ದಿನೇಶ ವಳಸಂಗ, ಬಸವರಾಜ ಕೊಳದೂರ, ಬಸವರಾಜ ಸಂಗೊಳ್ಳಿ, ಮೃತ್ಯುಂಜಯ ಮರಿಹಾಳ, ಆನಂದ ಕತ್ತಿಶೆಟ್ಟಿ, ಉಮಾಕಾಂತ ಭಾರತಿ ಸೇರಿದಂತೆ ಇತರರು ಇದ್ದರು.

loading...