ಯಡಿಯೂರಪ್ಪ ಆ್ಯಂಡ್ ಟಿಂ ಹಿಂದು ವಿರೋಧಿಗಳು : ಉಗ್ರಪ್ಪ ಆರೋಪ

0
79
loading...

ಕನ್ನಡಮ್ಮ ಮ್ಮ ಸುದ್ದಿ

ಬೆಳಗಾವಿ:15 ರಾಜ್ಯದಲ್ಲಿ ಈಗಾ ಕಾಂಗ್ರೆಸ್ ಅಲೆ ಹೆಚ್ಚಾಗಿದೆ ಮತ್ತೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಜೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು.
ಅವರು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಎಪಿಎಮ್ ಸಿ, ಜಿಪಂ, ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಮುಂಚಣಿಯಲ್ಲಿದೆ. ಹತಾಶೆಯಾಗಿರುವ ಬಿಜೆಪಿಯವರು ಗುಜರಾತ ಮಾದರಿಯಲ್ಲಿ ಸಮಾಜವನ್ನ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ‌ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಅವರು ರಾಜ್ಯ ಸರಕಾರದ ವಿರುದ್ಧ ಮಾತಾಡುತ್ತಿದ್ದಾರೆ. ಹಿಂದೂಗಳ ವಿರೋಧಿಗಳು ಬಿಜೆಪಿಯವರು ಎಂದು ಆಕ್ರೋಶವ್ಯಕ್ತಪಡೆಸಿದರು.
ಬಿಜೆಪಿಯವರು ಹಿಂದುಗಳ ವಾರತ್ವದಾರರು ಎಂದು ಹೇಳಿಕೊಂಡು ಹೋಗುತ್ತಿದ್ದಾರೆ ಅದು ಸುಳ್ಳು ಇವರು ಹಿಂದು ವಿರೋಧಿಗಳಿದ್ದಾರೆ‌. ದಕ್ಷಿಣ ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಪ್ರವೃತಿ ನಡೆಸಿದ್ದಾರೆ. ಕಲಡ್ಕ ಪ್ರಕರಣವನ್ನು ಸತ್ಯಾಸತ್ಯತೆ ಅರಿಯದೆ ಯಡಿಯೂರಪ್ಪ ಮತ್ತು ಅವರ ಟಿಂ ಅಮಿತ ಷಾ ಅವರ ಪ್ರೇರೇಪಣೆಯಿಂದ ಮಾತನಾಡುತ್ತಿದ್ದಾರೆ. ಈಗಲಾದರು ಯಡಿಯೂರಪ್ಪ ನವರು ಬೆಂಕಿ ಹಚ್ಚುವುದನ್ನು‌ಬಿಡಬೇಕೆಂದು ಹೇಳಿದರು.

loading...