ರಸ್ತೆ ಅಪಘಾತ ಮೂರು ಜನ ಬೀಕರ ಸಾವು

0
108
loading...

ಬೆಳಗಾವಿ: ಮಸರಗುಪ್ಪ ಗ್ರಾಮದ ಹತ್ತಿರ ಬೈಕ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಹುಕ್ಕೇರಿ ತಾಲೂಕಿನ ಹುಲ್ಲಳ್ಳಿ ಗ್ರಾಮದ ರುಷಭ್ ಅಪ್ಪಣ್ಣ ಬೆಳಲಿ (23), ಬೆಲ್ಲದ ಭಾಗೇವಾಡಿ ಅಣ್ಣಪ್ಪ ಗಂಗವ್ವ ಗಸ್ತಿ (33), ಮೃತ ವ್ಯಕ್ತಿಗಳು. ಸಂಜೆ ಹುಕ್ಕೆರಿಯಿಂದ ಸಂಕೇಶ್ವರ ಕಡೆಗೆ ಹೋಗುತ್ತಿದ್ದ ಬೈಕ್ ಎದುರಿಗೆ ಬರುವ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ನೋಗನಿಹಾಳದ ಸಾಗರ ತಳವಾರ (22) ಗಂಭೀರ ಗಾಯಗೊಂಡು ಸಂಕೇಶ್ವರ ತಾಲೂಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...