ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ: ಶಾಸಕ ಪಾಟೀಲ

0
27
loading...

ಬೈಲಹೊಂಗಲ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರತಿಯೊಂದು ವಿಧಾನ ಸಭಾಕ್ಷೇತ್ರದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಮೂರು ವರ್ಷದ ಮೋದಿ ಸಾಧನೆ ತಿಳಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗುತ್ತದೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಶಾಸಕರಾದ ಡಾ.ವಿ.ಆಯ್ ಪಾಟೀಲ ಭವಿಷ್ಯ ನುಡಿದರು.
ಸಮೀಪದ ಮುರಗೋಡದಲ್ಲಿ ಪಂಡಿತ ದೀನದಯಾಳ ಉಪಾದ್ಯಾಯರ ಜನ್ಮ ಶತಮಾನೋತ್ಸವ ಅಂಗವಾಗಿ 15 ದಿನಗಳ ಬಿಜೆಪಿ ವಿಸ್ತಾರಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎನ್‍ಡಿಎ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಉತ್ತಮ ಸಾಧನೆ ಮಾಡಿತ್ತಿರುವ ಹಲವಾರು ಯೋಜನೆಗಳಾದ ಪ್ರಧಾನ ಮಂತ್ರಿ ಜನಧನ ಯೋಜನೆ, ರೈತರಿಗೆ ಫಸಲ ಭಿಮಾ ಯೋಜನೆ, ನೋಟ ಬ್ಯಾನ್ 20 ಕೋಟಿ ರುಪೇ ಕಾರ್ಡ, ಗ್ಯಾಸ್ ವಿತರಣೆ, ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ಹೊಗಿ ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಮುಂದಾಗಬೇಕು ಎಂದರು. ಮಠದ ಆವರಣದಲ್ಲಿ ನೀಲಕಂಠ ಸ್ವಾಮಿಗಳ ಅಮೃತ ಹಸ್ತದಿಂದ ಸಸಿ ನೆಟ್ಟು ಪರಿಸರ ರಕ್ಷಣೆ ಎಲ್ಲರ ಹೊಣೆ ಪ್ರತಿಯೊಬ್ಬರು ಗಿಡಮರ ನೆಟ್ಟು ಪರಿಸರ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು. ಈ ವೇಳೆ ಮಠದಿಂದ ಪಾದಯಾತ್ರೆ ಮುಖಾಂತರವಾಗಿ ಹೊಸಪೇಟೆ, ಕವಲಪೇಟೆ, ಮಾರ್ಗವಾಗಿ ಮನೆ ಮನೆಗೆ ತೆರಳಿ ಮೋದಿ ನೆತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಬಿತ್ತಿ ಪತ್ರ ಹಂಚಿ ಗಮನ ಸೇಳೆದರು, ನಂತರ ಮಾದರಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ವನಮಹೋತ್ಸವ ಆಚರಿಸಿದರು. ಪೋಸ್ಟಗಲ್ಲಿ ಮುಖಾಂತರ ಪ್ರಚಾರ ನಡೆಸಿದರು,
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜ ಬಂಡಿವಡ್ಡರ, ಸವದತ್ತಿ ತಾಲೂಕಾ ವಲಯ ಅರಣ್ಯ ಅಧಿಕಾರಿ ಸುನೀತಾ ನಿಂಬರಗಿ, ತಾಪಂ ಸದಸ್ಯ ಸುರೇಶ ಮ್ಯಾಕಲ, ವಿ ಬಿ ದೇಸಾಯಿ, ಸಚೀನ ದೇಸಾಯಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಮಹಾಂತೇಶ ಬಾಳಿಕಾಯಿ, ಚಂದ್ರು ಚಿನಿವಾಲರ, ಮಲ್ಲನಗೌಡ ಗೌಡತಿ, ಸುನೀಲ ತಿವಾರಿ, ರಶೀದ ಪಾಟೀಲ, ಮಹಾಂತೇಶ ಗೌಡತಿ, ಉಳವೇಶ ದೂಡವಾಡ, ಉದಯ ಚಿಕ್ಕನವರ ಗ್ರಾಪಂ ಸದಸ್ಯರು ಇದ್ದರು.

loading...