ರೈತ ಚಳುವಳಿ ಗಟ್ಟಿಗೊಳಿಸುವ ಕಾರ್ಯ

0
65
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಧಾರವಾಡದಲ್ಲಿ ಜುಲೈ 21 ರಂದು ಜರುಗಿದ 38ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಹಳಿಯಾಳದಿಂದಲೂ ಸಹ ಸಂಘಟನೆಯ ರೈತರು ತೆರಳಿದರು.
ಗ್ರಾಮೀಣ ಸಮಸ್ತ ಜನರ ಹಿತಕ್ಕಾಗಿ ಹೋರಾಟ ರೂಪಿಸಿ ರೈತ ಚಳುವಳಿ ಧ್ವನಿಯನ್ನು ಗಟ್ಟಿಗೊಳಿಸುವ ಕಾರ್ಯ ನಡೆದಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂಘಟನೆಯ ಸ್ಥಳೀಯ ಅಧ್ಯಕ್ಷ ಮಲ್ಲೇಶಿ ಗೌರಿ, ಪ್ರಧಾನ ಕಾರ್ಯದರ್ಶಿ ರಾಮಾ ಲಾಡ್ ಹಾಗೂ ಖಜಾಂಚಿ ಶಿವಪುತ್ರ ಕಲ್ಕುಂಡಿ ತಿಳಿಸಿದರು.

loading...