ಲಾರಿ ಪಲ್ಟಿ: ಆಟೋರಿಕ್ಷಾ, ಸ್ಕೂಟಿಜಕಂ

0
40
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಗೋವಾದಿಂದ ದಾಂಡೇಲಿಗೆ ಚಿಪ್ಸ್‍ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು (ಕೆ.ಎ:31, 5218) ಬರ್ಚಿ ರಸ್ತೆಯ ಬಂಗೂರನಗರ ಪದವಿ ಪೂರ್ವಕಾಲೇಜು ಬಳಿ ಪಲ್ಟಿಯಾಗಿದೆ. ಇದರಿಂದ ಅಲ್ಲಿ ನಿಂತಿದ್ದ ಆಟೋರಿಕ್ಷಾ ಹಾಗೂ ಸ್ಕೂಟಿ ಜಕ್ಕಂ ಗೊಂಡಿದೆ.
ಚಾಲಕನ ನಿರ್ಲಕ್ಷವೋ ಅಥವಾ ಆಯತಪ್ಪಿಯೋ ಮುಗುಚಿ (ಪಲ್ಟಿ) ಬಿದ್ದಿದೆ. ಹೀಗೆ ಬಿದ್ದ ಲಾರಿರಸ್ತೆ ಪಕ್ಕವೇ ಇದ್ದಕಟ್ಟಡ (ಮನೆ)ಯೊಂದರ ಮೇಲೆ ಬಿದ್ದಿದ್ದು, ಮನೆಯವರು ಒಳಗಡೆ ಮಲಗಿದ್ದಕಾರಣಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮನೆಯ ಮುಂಬಾಗದಗೋಡೆಜಕ್ಕಂಗೊಂಡಿದೆ.
ಲಾರಿ ಪಲ್ಟಿಯಾದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.ವಿಷಯ ತಿಳಿಯುತ್ತಿದ್ದಂತೆಯೇ ಪೋಲಿಸರು ಸ್ಥಳಕ್ಕೆ ದಾವಿಸಿ ರಸ್ತೆಯ ಮೇಲೆ ಬಿದ್ದಿದ್ದಚಿಪ್ಸ್ ಹಾಗೂ ಲಾರಿಯನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.ಈ ಘಟನೆಗೆ ಸಂಬಂದಿಸಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

loading...