ವಡವಿ ಹೊಸೂರ ಶಾಲೆಯಲ್ಲಿ ಸ್ವಚ್ಚ ಭಾರತ ಮಿಷನ್ ಜಾಗೃತಿ ಶಿಬಿರ

0
40
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ವಡವಿ ಹೊಸೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕರು ಗದಗ ಇವರ ಆದೇಶದ ಮೇರೆಗೆ ವಡವಿ, ಹೊಸೂರ, ಬೆಳಗಟ್ಟಿ ಹಾಗೂ ಅಲಗಿಲವಾಡ ನಾಲ್ಕು ಗ್ರಾಮಗಳಿಗೆ ಸಂಬಂಧಿಸಿದಂತೆ ಸ್ವಚ್ಚಭಾರತ ಮಿಷನ್ ಜಾಗೃತಿ ಶಿಬಿರ ಏರ್ಪಡಿಸಲಾಗಿತ್ತು.
56 ಜನ ಪ್ರೇರಕರಿಗೆ ಒಂದು ದಿನದ ತರಭೇತಿ ನೀಡಿ ಮಾತನಾಡಿದ ನೋಡಲ್ ಅಧಿಕಾರಿ ಜಿ ಎಮ್. ಮುಂದಿನಮನಿ ಹಾಗೂ ಪಿಡಿಒ ತನ್ವೀರ ಸ್ವಚ್ಚಭಾರತ ಅಭಿಯಾನದ ಅಡಿಯಲ್ಲಿ ಗದಗ ಜಿಲ್ಲೆ ಸಂಪೂರ್ಣವಾಗಿ ಬಯಲು ಶೌಚಮುಕ್ತವನ್ನಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ತರಭೇತಿ ಶಿಬಿರ ಹಮ್ಮಿಕೊಂಡಿದ್ದು ತರಭೇತಿ ಪಡೆದ ಪ್ರತಿಯೊಬ್ಬರು ತಲಾ 10-15 ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಶೌಚಾಲಯ ಕಟ್ಟಿಸಲು ಅವರ ಮನವೊಲಿಸುವುದರೊಂದಿಗೆ ಜಾಗೃತಿ ಮೂಡಿಸಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ಎಸ್ ಎಫ್. ಮಠದ, ಎಮ್ ಬಿ. ಹಡಪದ, ಜಿ ಜಿ.ರಾಠೋಡ, ಎಚ್ ಎಸ್. ಜಕ್ಕಲಿ, ಮಾನೇಗಾರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸಣ್ಣಗಂಗವ್ವ ಭಾವಿ ಕಾರ್ಯದರ್ಶಿ ಎಮ್ ಡಿ. ಎಲಿಗಾರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಶಾಲೆಯ ಇತರ ಸಿಬ್ಬಂದಿಗಳು ಇದ್ದರು.

loading...