ವಿದ್ಯಾರ್ಥಿಗಳಿಂದ ಸ್ವಚ್ಚ ಭಾರತ ಮಿಷನ್ ಜಾಗೃತಿ ಜಾತಾ

0
38
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮವನ್ನಾಗಿಸುವ ಉದ್ದೇಶ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸ್ವಚ್ಚ ಭಾರತ ಅಭಿಯಾನದ ನೋಡಲ್ ಅಧಿಕಾರಿ ಕರಿಸಿದ್ದಪ್ಪ ಬುಗಟೆ ಹಾಗೂ ಪಿಡಿಒ ಅಧಿಕಾರಿ ಸುರೇಶ ಕಲವಡ್ಡರ ಅವರು ಗ್ರಾಮಸ್ಥರಿಗೆ ಕಡ್ಡಾಯವಾಗಿ ಪ್ರತಿಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ವಿನಂತಿಸುವುದರೊಂದಿಗೆ ಪ್ರತಿಜ್ಞಾವಿಧಿ ಬೋದಿಸಿದರು. ಶಾಲಾ ಮಕ್ಕಳು ಸಹ ಘೋಷಣೆಗಳೊಂದಿಗೆ ಗ್ರಾಮದೆಲ್ಲಾಕಡೆ ಸಂಚರಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ರಾಜಶೇಖರ ರಾಹುತ, ಶಿವಾನಂದ ಜಕ್ಕಲಿ, ಮಂಜುನಾಥ ಕರೆಕೆಂಚಪ್ಪನವರ, ಗಿರಿಜಾ ಕುರಿ, ಯಶೋಧಾ ಮಾಗಳಮಠ ಹಾಗೂ ಶಾಲಾ ಶಿಕ್ಷಕರು ಮತ್ತು ಮಕ್ಕಳು ಸೇರಿದಂತೆ ಬಸವರಾಜ ಸುಗ್ನಳ್ಳಿ ಮಂಜುನಾಥ ಕಮ್ಮಾರ, ಪ್ರಸಾದ ಆಡೀನ, ಸಿದ್ದಲಿಂಗಯ್ಯ ಹೊಂಬಾಳಿಮಠ, ಹನಮಂತ ಕ್ಯಾಸಕ್ಕಿ, ಅಕ್ಕಮ್ಮ ಹರಿಜನ, ಸೇರಿದಂತೆ ಹಲವಾರು ಜನರು ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

loading...