ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

0
34
loading...

ಕನ್ನಡಮ್ಮ ಸುದ್ದಿ-ನರಗುಂದ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಸರ್ಕಾರದಿಂದ ನಡೆದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಗ್ರಾಮೀಣ ವಿದ್ಯಾರ್ಥಿಗಳು ಮಾಡುವಲ್ಲಿ ಸಫಲರಾಗುತ್ತಾರೆ ಎಂದು ಶಾಸಕ ಬಿ.ಆರ್. ಯಾವಗಲ್ ತಿಳಿಸಿದರು.
ನರಗುಂದ ತಾಲೂಕ ಸಮೀಪದ ಹೆಬ್ಬಾಳದ ವಿವೇಕಾನಂದ ಪ್ರೌಢ ಶಾಲೆ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಕೊಡಮಾಡಿದ ಬೈಸಿಕಲ್‍ಗಳನ್ನು ಜು. 15 ರಂದು ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಇಂದು ಹೆಚ್ಚಿನ ಮಾನ್ಯತೆ ಇದೆ. ಈ ಕಾರಣದಲ್ಲಿ ಉತ್ತಮ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮುಂದಾಗಿ ಪಾಲಕರಿಗೆ ಹಾಗೂ ಕಲಿಸಿದ ಗುರುಗಳಿಗೆ ಗೌರವ ತರಬೇಕೆಂದು ಹೇಳಿದರು.
ಬಿ.ಜಿ ನಂದಿ, ಎಸ್.ಜಿ. ಪಾಟೀಲ, ಜಿ.ಟಿ. ದೊಡಮನಿ, ಬಿ.ಡಿ. ಯಲರಡ್ಡಿಯವರ, ಪ್ರವೀಣ ಯಾವಗಲ್, ವ್ಹಿ.ಎಚ್. ಖ್ಯಾಡದ, ಗ್ರಾಪಂ ಅಧ್ಯಕ್ಷ ಮಂಜುನಾಥ ಜುಟ್ಟನ್ನವರ, ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಬಿ. ಖ್ಯಾಡದ,ಎಸ್.ಎಸ್. ಮರಿಯಕ್ಕನವರ,ಐವ್ಹಿ. ಹುಣಸೀಕಟ್ಟಿ ಉಪಸ್ಥಿತರಿದ್ದರು. ಎಸ್.ಎಸ್. ಮಂಜಣ್ಣವರ ನಿರೂಪಿಸಿದರು. ಎಸ್.ಆರ್. ಕಲ್ಲೂರ ವಂದಿಸಿದರು.

loading...