ವಿದ್ಯಾರ್ಥಿಗಳು ಗುರಿ ತಲುಪಲು ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಚನ್ನವೀರ ಶ್ರೀಗಳು

0
59
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಬೇಕಾದರೆ ಕಾಕದೃಷ್ಟಿ, ಶ್ವಾನನಿದ್ರೆ, ಅಲ್ಪಹಾರಿ, ಬಕಜ್ಞಾನ ಹಾಗೂ ಗೃಹತ್ಯಾಗಿ ಈ ಐದು ಸೂತ್ರಗಳನ್ನು ಅಳವಡಿಸಿಕೊಂಡರೆ ತಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಕರೆ ನೀಡಿದರು.

ಇತ್ತೀಚೆಗೆ ತಾಲೂಕಿನ ವಡವಿಹೊಸೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜೀವವೀಮಾ ಶಾಲೆ ಘೋಷಣೆ, ಪಾಲಸಿ ಬಾಂಡ್ ಹಾಗೂ ಅನುದಾನ ವಿತರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಗುರುಗಳು ಹೇಳಿದ ವಿಷಯವನ್ನು ಹೊರತು ಪಡಿಸಿ ಪ್ರಪಂಚದ ಜ್ಞಾನವನ್ನು ಅರಿತುಕೊಂಡರೆ ಜೀವನದಲ್ಲಿ ನಾವು ಏನನ್ನಾದರು ಸಾಧಿಸಬಹುದು ಎಂಬ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಎಲ್‍ಐಸಿ ಮಾರುಕಟ್ಟೆ ಪ್ರಬಂಧಕ ಪಿ.ಡಿ.ಬಂಟ್ ಅವರು ತಮ್ಮ ಸಂಸ್ಥೆಯ ಪರವಾಗಿ 7500 ರೂ. ನೀಡಿ ಮಾತನಾಡಿದ ಅವರು. ಈ ಶಾಲೆಗೆ ಅನುದಾನ ನೀಡಿದರಲ್ಲದೇ ವಡವಿ ಹೊಸೂರ ಈ ಗ್ರಾಮವನ್ನು ಸಹ ವಿಮಾ ಗ್ರಾಮವನ್ನಾಗಿ ಘೋಷಿಸಬೇಕೆಂದು ಗಡ್ಡದೇವರಮಠರಿಗೆ ಸೂಚಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂದು ಎಲ್ಲಾ ಸೌಲಭ್ಯಗಳೊಂದಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದ್ದು ನಿಮ್ಮ ಮಕ್ಕಳನ್ನು ದಯವಿಟ್ಟು ಸರಕಾರಿ ಶಾಲೆಗೆ ಸೇರಿಸಿರಿ ಎಂದು ನೆರೆದ ಪಾಲಕರಲ್ಲಿ ವಿನಂತಿಸಿದರು.
ಎಲ್‍ಐಸಿ ಸಲಹೆಗಾರ ಆರ್ ಆರ್. ಗಡ್ಡದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್‍ಐಸಿ ವಿಭಾಗಾಧಿಕಾರಿ ಎಚ್ ಕೆ. ರವೀಕಿರಣ ವಿಮಾಶಾಲೆ ಎಂದು ಘೋಷಣೆ ಮಾಡುವುದರೊಂದಿಗೆ 31 ಪಾಲಸಿದಾರರಿಗೆ ಬಾಂಡಗಳನ್ನು ವಿತರಿಸಿದರು. ಚಂದ್ರಶೇಖರ ಹುಲ್ಲೂರ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಲ್‍ಐಸಿ ಎಲ್ಲಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಸಣ್ಣಗಂಗವ್ವ ಭಾವಿ, ಎಚ್. ಮಲ್ಲಿಕಾರ್ಜುನರಡ್ಡಿ, ಪ್ರವೀಣಗೌಡ ಪಾಟೀಲ, ರಾಜೀವರಡ್ಡಿ ಬಮ್ಮನಕಟ್ಟಿ, ಎಚ್.ಎಸ್.ಜಕ್ಕಲಿ, ಎಸ್ ಎಸ್. ಮಠಪತಿ, ಎಸ್ ಡಿ. ವಡವಿ, ಬಿ ಜಿ. ಶಿವಲಿಂಗಣ್ಣವರ, ಎನ್ ಪಿ. ಕಂತ್ರೋಜಿ, ಎಮ್ ಬಿ. ಶರಣಯ್ಯ ಗೋಬಿ, ಹಡಪದ, ಮಲ್ಲಪ್ಪ ಹುಲ್ಲೂರ ಶಿಕ್ಷಕರೆಲ್ಲರೂ ಸೇರಿದಂತೆ ಹಲವಾರು ಉಪಸ್ಥಿತರಿದ್ದರು. ಎಸ್ ಎಫ್. ಮಠದ ಸ್ವಾಗತಿಸಿದರು. ಎಸ್ ಎನ್. ಮಡಿವಾಳರ ವಂಧಿಸಿದರು ಬಿ ಎಚ್. ಮಾನೇಗಾರ ನಿರೂಪಸಿದರು.

loading...