ವಿದ್ಯಾರ್ಥಿಗಳು ದೇಶದ ಪ್ರಗತಿಗಾಗಿ ಶ್ರಮಿಸಬೇಕು: ಶ್ರೀಗಳು

0
34
loading...

ಕನ್ನಡಮ್ಮ ಸುದ್ದಿ-ನರಗುಂದ: ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದ್ದು ಈ ನೆಲದಲ್ಲಿ ನಾವೆಲ್ಲ ಉತ್ತಮ ಮನೋಧರ್ಮಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಪ್ರಗತಿಗಾಗಿ ಶ್ರಮಿಸಬೇಕೆಂದು ಭೈರಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಹೇಳಿದರು.
ಸ್ಥಳೀಯ ಯಡೆಯೂರ ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಜು. 14 ರಂದು ನಡೆದ ವಿದ್ಯಾರ್ಥಿ ಒಕ್ಕೂಟ ಹಾಗೂ ಪಿಯುಸಿ ಪ್ರಥಮ ವರ್ಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಜಾತಿ ಮತ,ಪಂಥ ತೊರೆದು ಜಗತ್ತಿಗೆ ಅನೇಕ ಮಹಾನುಭಾವರು ಸಮಾನತೆಗಾಗಿ ನೀಡಿದ ಕೊಡುಗೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಮಹತ್ವದ್ದಾಗಿದೆ. ಶಿಕ್ಷಣದಲ್ಲಿ ಈಗಿನ ದಿನಗಳಲ್ಲಿ ಅಪಾರ ಸ್ಪರ್ಧೆಗಳಿದ್ದು ಉತ್ತಮ ಅಂಕಗಳೊಂದಿಗೆ ಶಿಕ್ಷಣ ಪಡೆದು ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರೇಕೊಪ್ಪ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ಅರಕೇರಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದುವ ಮನೋಧರ್ಮ ಬೆಳೆಸಿಕೊಳ್ಳಬೇಕು. ಗ್ರಾಮೀಣ ವಿದ್ಯಾರ್ಥಿಗಳು ಶಹರ ವಿದ್ಯಾರ್ಥೀಗಳಿಗಿಂತ ಹೆಚ್ಚಿನ ಓದಿನಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ಮನೋಧರ್ಮ ಎಲ್ಲ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಎಸ್.ಎನ್. ಪೂಜಾರ, ಶ್ರೀಧರ ಸಾತನ್ನವರ, ಹೇಮಾವತಿ ಅಮ್ಮಣ್ಣವರ, ದೀಪಾ ಬೆಳವಟಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ವ್ಹಿ.ಬಿ. ಪಾಟೀಲ, ಈರಣಗೌಡ ಪಾಟೀಲ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶಗೌಡ ಪಾಟೀಲ, ಫಾರೂಖಅಹ್ಮದ ಮೂಲಿಮನಿ, ಎಂ.ಜಿ. ಬೋಗಾರ, ಎನ್.ಎಂ. ಬಡಿಗೇರ, ಎನ್.ಎ. ಕಿತ್ತೂರ ಉಪಸ್ಥಿತರಿದ್ದರು. ಆರ್.ಕೆ. ಐನಾಪುರ ಸ್ವಾಗತಿಸಿದರು. ಬಿ.ಆರ್. ಕುರಿ ನಿರೂಪಿಸಿದರು. ಎಸ್.ಬಿ. ವಾಳದ ವಂದಿಸಿದರು.

loading...