ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕ

0
41
loading...

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಗಿಬ್ ಸರ್ಕಲ್‍ನಲ್ಲಿ ಹೆಗಡೆ ಬಸ್‍ಗೆ ಏರುತ್ತಿರುವ ಪ್ರೌಢ ಶಾಲಾ ವಿದ್ಯಾರ್ಥಿನಿಗೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಬಸ್ ಚಾಲಕ ಹಾಗೂ ಸ್ಥಳೀಯರು ಹಿಡಿಯುವಷ್ಟರಲ್ಲಿ ಯುವಕ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಗಿಬ್ ಸರ್ಕಲ್‍ನಲ್ಲಿ ಹೆಗಡೆ ಬಸ್‍ಗಾಗಿ ಕಾಯುತ್ತಿದ್ದ ಪ್ರೌಢ ಶಾಲಾ ವಿದ್ರ್ಯಾರ್ಥಿನಿಗೆ ಕೆಎ/47 ಎಚ್ 9912 ನಂಬರ್ ಪ್ಲೇಟ್ ಹೊಂದಿರುವ ಡಿಸ್ಕವ್ರಿ ಬೈಕ್‍ನಲ್ಲಿ ಆಗಮಿಸಿದ ಯುವಕನೊಬ್ಬ ಕಿರುಕುಳ ನೀಡುವುದಲ್ಲದೇ ಬಸ್ ಏರುವಾಗ ವಿದ್ಯಾರ್ಥಿನಿಯ ಮೈ ಮೇಲೆ ಕೈ ಹಾಕಿದ್ದಾನೆ. ಇದನ್ನು ಗಮನಿಸಿದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಭಾಸ್ಕರ ನಾಯಕ ಹಾಗೂ ಸ್ಥಳೀಯರು ಯುವಕನನ್ನು ಹಿಡಿಯುವಷ್ಟರಲ್ಲಿ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಕುರಿತು ಕುಮಟಾ ಪೆÇಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ಪಾಲಕರು ದೂರು ಸಲ್ಲಿಸಿದ ಬಳಿಕ ಪೆÇಲೀಸರು ಗಿಬ್ ಸರ್ಕಲ್‍ನಲ್ಲಿ ಬಿಟ್ಟುಹೋದ ಬೈಕ್ ಮತ್ತು ಮೊಬೈಲ್‍ನ್ನು ವಶಕ್ಕೆ ಪಡೆದುಕೊಂಡದ್ದು, ಯುವಕ ಮೂರೂರಿನ ಹಟ್ಟಿಕೇರಿ ನಿವಾಸಿಯೆಂದು ತಿಳಿದು ಬಂದಿದ್ದು, ಆತನ ಶೋಧಕಾರ್ಯ ನಡೆಸಿದ್ದಾರೆ.

loading...