ವಿಶ್ವವೆ ಹೆಮ್ಮೆ ಪಡುವಂತ ಆಡಳಿತ ನಡೆಸಿದ ಪ್ರಧಾನಿ ಮೋದಿ: ಪ್ರಮೋದ ಹೆಗಡೆ

0
47
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಇಡೀ ವಿಶ್ವವೆ ಹೆಮ್ಮೆ ಪಡುವಂತಹ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡ ಶ್ರೇಯಸ್ಸು ಈ ದೇಶದ ಹೆಮ್ಮೆಯ ಸುಪುತ್ರ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಲೇಬೇಕು. ಭಾರತದ ಎಪ್ಪತ್ತು ವರ್ಷಗಳ ಇತಿಹಾಸದ ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚರಿತ್ರಾರ್ಹ ಕೆಲಸ ಮಾಡುತ್ತಿದ್ದಾರೆ ಎಂದು ಬಾ.ಜ.ಪ ಮುಖಂಡ, ಬಾ.ಜ.ಪ.ದಿಂದ ನಿಯೋಜಿತ ವಿಸ್ತಾರಕ ಪ್ರಮೋದ ಹೆಗಡೆ ಹೇಳಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು 57 ದೇಶಗಳಲ್ಲಿ ಸಂಚಾರ ಮಾಡಿ ದಾಖಲೆ ನಿರ್ಮಿಸಿದ್ದಾರೆ.ಮೇಕ್‍ಇನ್‍ಇಂಡಿಯಾ, ನೋಟುಅಮಾನ್ಯ ಹಾಗೂ ಜಿ.ಎಸ್.ಟಿಜಾರಿಯ ಮೂಲಕ ಈ ದೇಶದಆರ್ಥಿಕ ಬಲವರ್ಧನೆಗೆ ಮುನ್ನುಡಿ ಬರೆದಿದ್ದಾರೆ.ನೋಟುಅಮಾನ್ಯದಿಂದಾಗಿದೇಶದ 2 ಲಕ್ಷಕ್ಷಕ್ಕೂ ಹೆಚ್ಚು ಕಳ್ಳ ಖಾತೆಗಳು ರದ್ದಾಗಿವೆ, ಒಂದುದೇಶ, ಒಂದುತೆರಿಗೆ, ಒಂದು ಮಾರ್ಕೆಟ್‍ಇದುಅದ್ಭುತವಾದಕಲ್ಪನೆಯಾಗಿದ್ದು, ಇದುಜನರಿಗೆಅನುಕೂಲಕರವಾದುದ್ದು.ಸರ್ಜಿಕಲ್ ದಾಳಿಯ ಮೂಲಕ ಈ ದೇಶದ ಸ್ವಾಭಿಮಾನಎತ್ತಿ ಹಿಡಿದಿರುವುದಷ್ಟೇಅಲ್ಲದೇಯೋಧರಿಗೆರಕ್ಷಣೆ ಹಾಗೂ ಪಿಂಚಣಿ ನೀಡುವ ಮೂಲಕ ಅವರಲ್ಲಿಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. 70 ವರ್ಷಗಳ ಸಂಸತ್ತಿನಲ್ಲಿ ವಿರೋಧ ಪಕ್ಷವೇಇಲ್ಲದಂತಹ ಸ್ಥಿತಿ ನಿರ್ಮೀಸುವ ಮೂಲಕ ಮತ್ತೊಂದುಇತಿಹಾಸ ನಿರ್ಮಿಸಿದ್ದಾರೆ. ದೇಶದ 13 ರಾಜ್ಯಗಳಲ್ಲಿ ಬಿ.ಜೆ.ಪಿ ಆಡಳಿತವಿದೆ. ಮುಂಬರುವಕರ್ನಾಟಕದಚುನಾವಣೆಯಲ್ಲಿಯೂ ಸಹ ಬಾ.ಜ.ಪ ಬಹುಮತಗಳೊಂದಿಗೆ ಅಧಿಕಾರಕ್ಕೇರಲಿದೆಎಂದರು.ಪ್ರತಿಕ್ಷೇತ್ರದಲ್ಲೂ ಬೇರೆಕ್ಷೇತ್ರದವರನ್ನು ವಿಸ್ತಾರಕರನ್ನು ನಿಯೋಜಿಸಿ ವಿಸ್ತಾರಕರಿಂದ ಪಕ್ಷ ಸಂಘಟನೆಯ ಕೆಲಸ ಮಾಡುವ ಕೆಲಸ ನಡೆಯುತ್ತಿದೆ. ಭಾ.ಜ.ಪÀರಾಷ್ಟ್ರಾಧ್ಯಕ್ಷಅಮಿತ್ ಷಾ, ಪ್ರದಾನ ಮಂತ್ರಿ ನರೇಂದ್ರ ಮೋದಿ ಸೇರಿದೇಶದಲ್ಲಿ 3 ಲಕ್ಷದಷ್ಟುಜನ ವಿಸ್ತಾರಕರಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರದಅಭಿವೃದ್ದಿ ಕೆಲಸಗಳ ಬಗ್ಗೆ, ರಾಜ್ಯ ಸರಕಾರದ ಆಡಳಿತ ವೈಫಲ್ಯತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲವನ್ನೂತಾವೇ ಮಾಡಿದ್ದೆಂದು ಸುಳ್ಳು ಹೆಳುತ್ತಿದ್ದಾರೆ. ಕೇಂದ್ರದ ಹಣದಿಂದ ಬಹಳಷ್ಟು ಅಭಿವೃದ್ದಿ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿಯೂ ನಡೆದಿರುವ ಶೇ.70 ರಷ್ಟುಅಭಿವೃದ್ದಿ ಕೆಲಸಗಳು ಕೇಂದ್ರದಿಂದ ಬಂದಿರುವಂತಹಅನುದಾನದಿಂದ ನಡೆದಿದ್ದು. ನರೇಂದ್ರ ಮೋದಿಯವರಇಂತಹಅಭಿವೃದ್ದಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ, ಸಿದ್ರಾಮಯ್ಯನವರ ವೈಫಲ್ಯದ ಬಗ್ಗೆ ತಿಳಿಸುವ ಕೆಲಸ ಆರಂಭವಾಗಿದೆಎಂದರು.ಯಲ್ಲಾಪುರ-ಮುಂಡಗೋಡದ ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿಅನ್ನಬಾಗ್ಯಯೋಜನೆಯಲ್ಲಿಕೇಂದ್ರ್ರ 29 ರೂ.ಗಳಿಗೆ ಅಕ್ಕಿ ಖರೀದಿ ಮಾಡಿರಾಜ್ಯಕ್ಕೆ 1 ರೂ.ಗೆ ನೀಡುತ್ತಿದೆ.ಈಗ ರಾಜ್ಯದಲ್ಲಿ ಪಡಿತರ ವಿತರಣೆಯೂ ಸರಿಯಾಗಿಆಗುತ್ತಿಲ್ಲ. ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಾರೆ.ಆದರೆಇದರ ನೀತಿ ಸರಿಯಾಗಿಲ್ಲ. ಯಾವ ಯೋಜನೆಗಳೂ ಸಹ ಸಮರ್ಪಕವಾಗಿಅನುಷ್ಠಾಗೊಂಡಿಲ್ಲ. ದೀನದಯಾಳ ಯೋಜನೆಯಡಿಜಿಲ್ಲೆಗೆ 150 ಕೋಟಿರೂಕೇಂದ್ರದಿಂದ ಬಂದಿದೆ, ಆದರೆರಾಜ್ಯ ಸರಕಾರದಿಂದಯಾವಅಭಿವೃದ್ದಿ ಕೆಲಸಗಳೂ ಕಾಣುತ್ತಿಲ್ಲ. ಬರೀ ಘೋಷಣೆಗಳಾಗುತ್ತಿವೆ ಅಷ್ಟೇ ಎಂದರು.ಸುದ್ದಿ ಗೋಷ್ಠಿಯಲ್ಲಿ, ಬಾ.ಜ.ಪರಾಜ್ಯ ಸಮಿತಿ ಸದಸ್ಯರಾಜು ಧೂಳಿ, ದಾಂಡೇಲಿ ಘಟಕದಅಧ್ಯಕ್ಷ ಬಸವರಾಜ ಕಲಶೆಟ್ಟಿ, ಕಾರ್ಯದರ್ಶಿ ನರೇಂದ್ರಚೌಹಾಣ, ಸುಭಾಶಅರವಟಗಿ, ಯುವ ಮೋರ್ಚಾಅಧ್ಯಕ್ಷ ಮಂಜುನಾಥ ಪಾಟೀಲ, ಅಲ್ಪ ಸಂಖ್ಯಾತ ವಿಭಾಗದಜಿಲ್ಲಾಧ್ಯಕ್ಷರಫಿಕ್ ಹುದ್ದಾರ್, ಕಾರ್ಮಿಕ ವಿಭಾಗದಜಿಲ್ಲಾಧ್ಯಕ್ಷರೋಷನ್ ನೇತ್ರಾವಳಿ, ಪ.ಜಾತಿ ಮೋರ್ಚಾಆಧ್ಯಕ್ಷದಶರಥ ಬಂಡಿವಡ್ಡರ, ಹಿಂದುಳಿದ ವರ್ಗ ವಿಭಾಗದಅಧ್ಯಕ್ಷಗುರು ಮಠಪತಿ, ಬಾ,ಜ,ಪಉಪಾಧ್ಯಕ್ಷಚಂದ್ರ ಕಾಂತಕ್ಷೀರಸಾಗರ, ಪ್ರಶಾಂತ ಬಸೂರ್ತೆಕರ, ಪ್ರಮುಖರಾದ ಅಶೋಕ ಪಾಟೀಲ, ಎಮ್.ಸಿ. ಹೆಗಡೆ, ಜಿ.ಆರ್. ಪಾಟೀಲ, ವಾಸುದೇವ ಪ್ರಭು, ಎಸ್.ಎಮ್. ಪಾಟೀಲ, ಎಮ್.ಎಸ್. ನಾಯ್ಕ, ಚಿಂದಾನಂದ ಕಲಶೆಟ್ಟಿ, ಅಬ್ದುಲ್ ವಹಾಬ್ ಬಾಂಸರಿ ಮುಂತಾದವರಿದ್ದರು.

loading...