ವಿಷ ಹುಲ್ಲು ಸೇವಿಸಿ ಜಾನುವಾರುಗಳು ಸಾವು: ಆತಂಕದಲ್ಲಿ ರೈತರು

0
64
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಕಳೆನಾಷಕ ಸಿಂಪಡಿಸಿದ ಗೋವಿನಜೋಳದ ಹುಲ್ಲು (ಹಸಿರು ಮೇವು) ಸೇವಿಸಿ ಈವರೆಗೆ 10 ಜಾನುವಾರುಗಳು ಮೃತಪಟ್ಟು, ಸುಮಾರು 20 ಕ್ಕೂ ಅಧಿಕ ಜಾನುವಾರಗಳು ಅಸ್ವಸ್ಥಗೊಂಡಿದ್ದು, ರೈತರಲ್ಲಿ ಹಾಗೂ ಜಾನುವಾರು ಸಾಕಾಣಿಕೆ ಹೈನುಗಾರರಲ್ಲಿ ಆತಂಕ ಸೃಷ್ಟಿಸಿದೆ.
ತಾಲೂಕಿನ ಇಂದೂರ, ಕೊಪ್ಪ, ಇಂದಿರಾನಗರ, ಮಜ್ಜಿಗೇರಿ, ನ್ಯಾಸರ್ಗಿ ಗ್ರಾಮದ ಸುತ್ತಮುತ್ತ ಬೆಳೆಯಲಾದ ಗೋವಿನ ಜೋಳ ಬೆಳೆಯ ಹಸಿರು ಹುಲ್ಲು ಸೇವಿಸಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ವಾರದ ಅವಧಿಯಲ್ಲಿ ಹತ್ತಕ್ಕೂ ಅಧಿಕ ಜಾನುವಾರುಗಳು ಕಳೆ ನಾಷವಾಗಲಿ ಎಂದು ರೈತರು ಲಾಡಿಸ್ (ಕಳೆನಾಶಕ ಔಷಧಿ) ಸಿಂಪಡಿಸಿದ ಮೇವು ಸೇವಿಸಿ ಮೃತಪಟ್ಟರೆ, ಇನ್ನು 20 ಕ್ಕೂ ಅಧಿಕ ಜಾನುವಾರುಗಳು ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟ ನಡೆಸಿವೆ. ಕಳೆದ 3-4 ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಗೋವಿನ ಜೋಳ ಬೆಳೆ ಬೆಳೆದಿದ್ದು, ಈಗಾಗಲೇ ಬಹುತೇಕ ಕಡೆ ಎದೆಯುದ್ದ ಬೆಳೆದು ನಿಂತಿದ್ದು, ಉತ್ತಮ ಪಸಲಿನ ನಿರೀಕ್ಷೆಯಲ್ಲಿರುವ ರೈತರಿಗೆ ಈ ಘಟನೆಗಳು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಪಶು ಇಲಾಖೆಯ ವತಿಯಿಂದ ಇಂದೂರ ಗ್ರಾಮದಲ್ಲಿ ಡಂಗುರ ಮೂಲಕ ರೈತರಲ್ಲಿ ಜಾಗೃತಿ: ಗೋವಿನಜೋಳ ಜಮೀನಿನಲ್ಲಿ ಕಳೆನಾಶಕ ಸಿಂಪರಣೆ ಮಾಡಿ ಅದೆ ಹುಲ್ಲನ್ನು ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಹಾಕುವುದಾಗಲಿ. ಗದ್ದೆಯಲ್ಲಿ ಮೇಯಿಸುವುದಾಗಲಿ ಮಾಡಬಾರದು. ಅಲ್ಲದೇ ಜೋಳದ ಬೆಳೆ ತೆನೆ ಬಿಡುವ ಮೊದಲು ಅದರ ಹುಲ್ಲು ಸೇವಿಸುವುದು ಕೂಡ ವಿಷಕಾರಿಯಾಗುತ್ತದೆ. ಹಾಗಾಗಿ ರೈತರು ಜಾಗೃತಿ ವಹಿಸುವಂತೆ ಇಂದೂರ ಗ್ರಾಮದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗಿದೆ.
ರೈತರಿಗೆ ಸಲಹೆ: ಕಳೆನಾಶಕ ಸಿಂಪಡಿಸಿದ ಹಸಿರು ಮೇವು ಸೇವಿಸುವುದರಿಂದ ಜಾನುವಾರುಗಳ ಬಾಯಲ್ಲಿ ಜೊಲ್ಲು ಸೋರುವುದು, ನಡುಕ ಉಂಟಾಗುವುದು, ಹೊಟ್ಟೆ ಉಬ್ಬುವುದು, ದೇಹದ ಉಷ್ಣತೆಯಲ್ಲಿ ಏರಿಳಿತ ಉಂಟಾಗಿ ಸಾಯುತ್ತವೆ. ಬೆಳಿಗ್ಗೆಯಿಂದ ಮೇಯ್ದು ಸಂಜೆಯ ವೇಳೆಗೆ ಮೆಲುಕು ಹಾಕುವ ಸಂದರ್ಭದಲ್ಲಿ ರಸ ಒಡೆದು, ರಕ್ತದಲ್ಲಿ ವಿಷದ ಅಂಶ ಸೇರುತ್ತದೆ ಇದರಿಂದ ಏಕಾಏಕಿ ಸಾವನ್ನಪ್ಪುತ್ತವೆ. ಹಾಗಾಗಿ ಗೋವಿ£ ಜೋಳ ಗದ್ದೆಯಲ್ಲಿರುವ ಹಸಿರು ಹುಲ್ಲನ್ನು ಜಾನುವಾರುಗಳಿಗೆ ಹಾಕದಂತೆ ವೈದ್ಯರು ಸೂಚನೆ ನೀಡಿದ್ದಾರೆ.
**
ಕೆಲ ಭಾಗದ ಜಾನುವಾರುಗಳು (ಕಳೆನಾಶಕ ಔಷಧಿ) ಸಿಂಪಡಿಸಿದ ಮೇವು ಸೇವಿಸಿಯೇ ಮೃತಪಟ್ಟಿರುವುದು ದೃಡಪಟ್ಟಿದ್ದು, ಅಸ್ವಸ್ಥಗೊಂಡಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಸಾವನ್ನಪ್ಪಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ
ಅರವಿಂದ ಹುಜರಿತ್ತಿ ತಾಲ್ಲೂಕು ಪಶು ವೈದ್ಯಾಧಿಕಾರಿ
**
ಸಾ¯ ಮಾಡಿ ಕಷ್ಟಪಟ್ಟು ಹಸು ತಂದು ವ್ಯವಸಾಯ ಮಾಡುತ್ತಿದ್ದೇವೆ. ಪ್ರತಿ ವರ್ಷದಂತೆ ಈ ಬಾರಿಯಂತೆ ಗೋವಿನಜೋಳದಲ್ಲಿ ಬೆಳದಿರುವ ಮೇವನ್ನು ಹಸುಗೆ ಹಾಕಲಾಗಿತ್ತು. ಸೇವಿಸಿದ ಒಂದೆ ದಿನದಲ್ಲಿ ಹಸು ಸಾವನ್ನಪ್ಪಿದೆ ಇದರಿಂದ ಆಘಾತವಾಗಿದೆ.
ಯಲ್ಲಪ್ಪ ಓಣಿಕೇರಿ ಇಂದೂರ ಭಾಗದ ರೈತ

loading...