ಶಾಲಾ ಸಂಸತ್ ಚುಣಾವಣೆ

0
38
loading...

ಕನ್ನಡಮ್ಮ ಸುದ್ದಿ-ನರಗುಂದ: ತಾಲೂಕಿನ ಚಿಕ್ಕನರಗುಂದ ಜಿಎಚ್‍ಎಸ್ ಪ್ರೌಢಶಾಲೆಯ ಶಾಲಾ ಸಂಸತ್‍ನ 12 ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ಜರುಗಿತು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯøರ್ಥಿಗಳಿಗೆ ಆನೆ, ಚಕ್ಕಡಿ, ಕ್ರೀಡಾಜ್ಯೋತಿ, ಸೈಕಲ್, ತಕ್ಕಡಿ ಮುಂತಾದ ಚಿಹ್ನೆಗಳನ್ನು ನೀಡಲಾಗಿತ್ತು. ಮಕ್ಕಳು ಬ್ಯಾಲೆಟ್ ಪೇಪರನಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಶಾಲಾ ಸಂಸತ್ತಿಗೆ ಕಳಿಸಿಕೊಟ್ಟರು. ಪ್ರೌಢಶಾಲೆಯ 223 ನೊಂದಾಯಿತ ಮತದಾರರು ಸರದಿ ಸಾಲಿನಲ್ಲಿ ನಿಂತು ಆಧಾರಕಾರ್ಡ , ರೇಷನಕಾರ್ಡ, ಬ್ಯಾಂಕ ಪಾಸಬುಕ್ ಮುಂತಾದ ಗುರುತಿನಚೀಟಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ತಮ್ಮಗೌಪ್ಯ ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು.
ಚುನಾವಣೆ ನಂತರ ನಡೆದ ಫಲಿಂತಾಶದಲ್ಲಿ ಪ್ರಧಾನಮಂತ್ರಿಯಾಗಿ ಫಕ್ರುಸಾಬ ಯಲಿಗಾರ ,ಉಪಪ್ರಧಾನಮಂತ್ರಿಯಾಗಿ ಮಧುಮತಿ ಹಳೇಮನಿ ಹಾಗೂ ವರ್ಗ ಪ್ರತಿನಿಧಿಗಳಾಗಿ ಭೀಮವ್ವ ವಗ್ಗರ,ಮಲ್ಲಪ್ಪ ಹಳೇಮನಿ, ಬಸವರಾಜ ಬಚಲಾಪೂರ, ಐಶ್ವರ್ಯ ಲಿಂಗನಗೌಡ್ರ, ಪ್ರಭು ಮಾದರ, ಹೇಮಲತಾ ಪಾಟೀಲ, ಹನುಮಂತ ಮುಳ್ಳೂರ, ವಿಶಾಲಾ ಕುರಗುಂದ, ಮಹಾದೇವಪ್ಪ ಹೊಸಕೇರಿ, ಅಶ್ವಿನಿ ಗಾಣಿಗೇರ ಆಯ್ಕೆಯಾದರು.
ಶಿಕ್ಷಕಿ ರೂಪಾ ಜಡಿಮಠ ಮುಖ್ಯಚುನಾವಣಾ ಅಧಿಕಾರಿಗಳಾಗಿ, ಸುದರ್ಶನ ಅಂಬೇಕರ ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಟಿ.ಎ. ಶಿರೋಳ, ಎಸ್.ವ್ಹಿ ಮಲಗೌಡರ, ಜೆ,ಬಿ. ಆರೇರ, ಎಲ್.ಕೆ. ಖೋಡೆ , ವ್ಹಿ.ಎನ್. ಭೋಸಲೆ ಇವರುಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಪಿ.ಸಿ. ಕಲಹಾಳ , ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಧರ ಬಡಿಗೇರ, ಸಿ.ಆರ್.ಪಿಯ ಟಿ. ಎ. ಶೀನಪ್ಪನವರ ಉಪಸ್ಥಿತರಿದ್ದರು.

loading...