ಶಾಸಕ ರಾಮಕೃಷ್ಣ ಅವರಿಂದ ಕಾಮಗಾರಿಗೆ ಭೂಮಿ ಪೂಜೆ

0
37
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಜನರಿಗೆ ಕುಡಿಯುವ ನೀರು, ಉದ್ಯೋಗ, ಹಾಗೂ ಜಾನುವಾರಗಳಿಗೆ ಮೇವು ನೀಡುವುದರ ಕುರಿತು ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿ ಹೊಂದಿದ್ದು, ಸಾರ್ವಜನಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿ ತರುವುದರ ಮೂಲಕ ಜನರ ವಿಶ್ವಾಸಕ್ಕೆ ಸಾಕ್ಷೀಯಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ 2016-17ನೇ ಸಾಲಿನ ಎನ್‍ಆರ್‍ಡಿಡ್ಬ್ಲೂಪಿ ಯೋಜನೆಯಡಿಯಲ್ಲಿ 27ಲಕ್ಷ ರೂ.ವೆಚ್ಚದ ಮೇಲ್ಮಟ್ಟದ ಜಲಗಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಿರಹಟ್ಟಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತರುವುದರ ಮೂಲಕ ಚೆಕ್‍ಡ್ಯಾಂ, ರಸ್ತೆ, ಚರಂಡಿ, ಸಮುದಾಯ ಭವನ ನಿರ್ಮಾಣ, ಕೆರೆ ತುಂಬಿಸುವುದು, ಹೀಗೆ ಹತ್ತು ಹಲವಾರು ಯೋಜನೆಯನ್ನು ಹಾಕಿಕೊಂಡು ಕ್ಷೇತ್ರದ ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೊರ್ಲಹಳ್ಳಿ ಗ್ರಾಮದಲ್ಲಿ ಎನ್‍ಆರ್‍ಡಿಡ್ಬ್ಲೂಪಿ ಯೋಜನೆಯಡಿಯಲ್ಲಿ 15ಲಕ್ಷ ರೂ.ವೆಚ್ಚದಲ್ಲಿ ನೆಲಮಟ್ಟದ ಜಲಗಾರ ಕಾಮಗಾರಿಗೆ ಶಾಸಕ ದೊಡ್ಡಮನಿ ಭೂಮಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಶೋಭಾ ಮೇಟಿ, ಚೆನ್ನವೀರಪ್ಪ ಎಲಿಗಾರ, ತಂಬ್ರಳ್ಳಿ, ಹುಸೇನಸಾಬ್ ಮುಂಡರಗಿ, ಹನುಮಂತ ಕಿತ್ನೂರ, ತೋಟಪ್ಪ ಲಿಂಬಿಕಾಯಿ, ಶರಣಪ್ಪ ಕುಬಸದ, ಸೇರಿದಂತೆ ಇತರರು ಇದ್ದರು.

loading...