ಸರ್ಕಾರದ ವೈಫಲ್ಯತೆಗಳನ್ನು ಜನರಿಗೆ ತಿಳಿಸಿ

0
42
loading...

ಗೋಕಾಕ: ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಮಾಡುವಂತೆ ಅರಭಾವಿ ಕ್ಷೇತ್ರದ ವಿಸ್ತಾರಕ ಹಾಗೂ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ತಿಳಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದ ಅರಭಾವಿ ಮಂಡಲದ ವಿಸ್ತಾರಕರ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರ ವಿಸ್ತಾರಕರ ಸಭೆಯನ್ನು ಆಯಾ ಶಕ್ತಿಕೇಂದ್ರದಲ್ಲಿ ಮಾಡಬೇಕು. ಪ್ರತಿ ಭೂತಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಬೇಕು. ದಿನನಿತ್ಯ ಒಂದು ಮತಗಟ್ಟೆಯಲ್ಲಿ ಸಭೆ ನಡೆಸಿ ಕನಿಷ್ಠ 50 ಮನೆ ಸಂಪರ್ಕ ನಡೆಸಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು. ಸಾಮಾಜಿಕ ಜಾಲತಾಣದ ಕಾರ್ಯಾಗಾರ ನಡೆಸಬೇಕು. ಅಲ್ಲದೇ ವಾಟ್ಸ್‍ಅಫ್ ಗುಂಪುಗಳ ನಿರ್ಮಿಸಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಡಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ವಹಿಸಿದ್ದರು.
ಪರ್ವತಗೌಡ ಪಾಟೀಲ, ಬಸಗೌಡ ಡಿ. ಪಾಟೀಲ, ವಿಠ್ಠಲ ಪಾಟೀಲ, ರವಿ ಸೋನವಾಲ್ಕರ, ಬಸವಂತ ಕಮತಿ, ಅಜ್ಜಪ್ಪ ಗಿರಡ್ಡಿ, ಸುಭಾಸ ಕುರಬೇಟ, ಹನಮಂತ ತೇರದಾಳ, ಪರಸಪ್ಪ ಬಬಲಿ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಜಿಪಂ ಸದಸ್ಯ ಗೋವಿಂದ ಕೊಪ್ಪದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...