ಸಾರ್ವಜನಿಕ ಸೇವೆಗೆ ಪೊಲೀಸ್ ಇಲಾಖೆ ನಿಷ್ಠವಾಗಿರಬೇಕು: ಎಸ್ಪಿ

0
103
loading...

 

ಸಂಕೇಶ್ವರ :ಸಾರ್ವಜನಿಕ ಸೇವೆಯಲ್ಲಿರು ನಾವು ಇಲಾಖೆಗೆ ನಾವು ನೀಷ್ಠೆರಾಗರಬೇಕು ಅದು ನಮ್ಮ ಕರ್ತವ್ಯ ಎಂದು ಎಸ್ ಪಿ ರವಿಕಾಂತೇಗೌಡ ಇಂದಿಲ್ಲಿ ಹೇಳಿದರು.

ಗುರುವಾರ ಪಟ್ಟಣದ ಸಾಯಿ ಭವನದಲ್ಲಿ ಏರ್ಪಡಿಸಿದ ಹುಕ್ಕೇರಿ ವೃತದ ನಾವು ಪೊಲೀಸರು ಒಂದೆ ಕುಟುಂಬ
ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಎಸ್ ಪಿ ಬಿ.ಆರ್. ರವಿಕಾಂತೇಗೌಡ ಇಲಾಖೆಯಲ್ಲಿನ ಎಲ್ಲಾ ಹುದ್ದೆಗೆ ಸಮಾನ ಪ್ರಾಮುಖ್ಯತೆಯಿದೆ ಸಾರ್ವಜನಿಕ ಸೇವೆಯೆ ನಮ್ಮ ಮುಖ್ಯ ಗುರಿಯಾಗಿದ್ದು ೨೪ ಗಂಟೆ ಸೇವೆ ಮಾಡುವುದು ಒಂದೆ ಇಲಾಖೆ ಅದು ಪೊಲೀಸ ಇಲಾಖೆಯಾಗಿದೆ ತಮ್ಮ ಇಲಾಖೆಯ ಸಿಬ್ಬಂದಿ ಕುಟುಂಬದ ಸಮಸ್ಯೆ ಇದ್ದರು ಮೊದಲು ನಾವು ಸಾರ್ವಜನಿಕ ಸೇವೆ ಮಾಡುವುದೆ ನಮ್ಮ ಕರ್ತವ್ಯಕ್ಕೆ ನಾವು ಕೊಡುವ ಗೌರವವಾಗಿದೆ ಎಂದರು .

ಗೋಕಾಕ ಡಿಎಸ್ ಪಿ ವೀರಭದ್ರಯ್ಯ ಮಾತನಾಡಿ ನಾವೇಲ್ಲ ಒಂದೆ ಎಂಬ ಭಾವನೆ ಮೂಡಿಸಲು ಹಾಗೂ ನಮ್ಮ ಸಿಬ್ಬಂದಿಗಳು ಸಬಲೀಕರನವಾಗ ಬೇಕು ಎಂಬುವುದೆ ಈ ಚಹಾ ಕೂಟದ ಉದ್ದೇಶವಾಗಿದೆ ಎಂದರು .

ಸಮಾರಂಭದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ ಸಿಬ್ಬಂದಿಯ ಮಕ್ಕಳ ಕ್ರೀಡಾ ಕೂಟದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗೋಕಾಕ ಡಿಎಸ್ಪಿ ವೀರಭದ್ರಯ್ಯ ಸಿಪಿಐ ಸಂದೀಪಸಿಂಗ್ ಮುರಗೂಡ ಸಂಕೇಶ್ವರ ಪಿಎಸ್ಐ ಹೆಚ್ ಡಿ ಮುಲ್ಲಾ,ಹುಕ್ಕೇರಿ ಪಿಎಸ್ಐ ರವಿ ಯಡವನವರ ಸಂಕೇಶ್ವರ ಹುಕ್ಕೇರಿ ಯಮಕನಮರಡಿ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು ಕಾರ್ಯಕ್ರಮವನ್ನ ಪಿಎಸ್ ಐ ಮುಲ್ಲಾ ನಿರೂಪಿಸಿ ವಂದಿಸಿದರು .

loading...