ಸಾಲದ ಬಾದೆ ತಾಳಲಾರದೆ ರೈತ ಆತ್ಮಹತ್ಯೆ

0
42
ಸುರೇಬಾನ: ಸಾಲದ ಬಾದೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾದ ಘಟನೆ ರವಿವಾರ ಸಂಭವಿಸಿದೆ.
ಮೃತಪಟ್ಟ ದುರ್ದೈವಿ ಸಮೀಪದ ಮನಿಹಾಳ ಗ್ರಾಮದ ಶಂಕರಗೌಡ ಯಲ್ಲಪ್ಪಗೌಡ ಪಾಟೀಲ(59) ಎಂದು ಗುರುತಿಸಲಾಗಿದೆ. ಈತ ಆತ್ಮಾನಂದರ ಮಠದ ಹಿಂದಿನ ಗುಡ್ಡದಲ್ಲಿ ನೆಣಿಗೆ ಶರಣಾಗಿದ್ದಾನೆ. ಈತ ಸೊಸೈಟಿಯಲ್ಲಿ 25 ಸಾವಿರ ರೂಪಾಯಿ ಸಾಲಮಾಡಿ ತಿರಿಸಲಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
loading...