ಹಣ,ಪ್ರಶಸ್ತಿಗಳ ಹಿಂದೆ ಅಲೆಯಬಾರದು

0
33
loading...

ಅಥಣಿ: ಹಣ, ಪ್ರಶಸ್ತಿಗಳ ಹಿಂದೆ ನಾವು ಅಲೆಯಬಾರದು. ನಾವು ಮಾಡುವ ಕೆಲಸವನ್ನು ಪರಿಶುದ್ಧ ಮನಸ್ಸಿನಿಂದ ಮಾಡಿದರೆ ಸಮಾಜವೇ ಅದನ್ನು ಗುರುತಿಸಿ ಗೌರವಿಸುತ್ತದೆ ಎಂದು ಲಕ್ಷೇಶ್ವರ ಠಾಣೆಯ ಪಿಎಸ್‍ಐ ಬಸವರಾಜ ಬಿಸನಕೊಪ್ಪ ಹೇಳಿದರು.
ಅವರು ರವಿವಾರ ಇಲ್ಲಿನ ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇತ್ತಿಚೀಗೆ ಯುನಿವರಸೆಲ ಗೋಲ್ಬಲ್ ಆಕಾಡೆಮಿ ವತಿಯಿಂದ ಸಾಮಾಜಿಕ ಸೇವೆ ಗುರುತಿಸಿ ನೀಡಲಾದ ಡಾಕ್ಟೆರೇಟ ಪದವಿ ಪಡೆದ ಹಿನ್ನಲೆಯಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ವೇಳೆ ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆಯ ಅಧ್ಯಕ್ಷ ರವಿ ಪೂಜಾರಿ, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ,ಉಪಾಧ್ಯಕ್ಷ ಮಲ್ಲು ಗುಂಜಿಗಾಂವಿ, ಕುಮಾರ ಬಡಿಗೇರ, ಶಂಕರ ಮಗದುಮ್ಮ,ಶ್ರೀಧರ ರೆಡ್ಡಿ,ಸಿದ್ದು ಬಡಿಗೇರ, ಲಕ್ಷ್ಮಣ ವೈದಿ ಇನ್ನಿತರಿದ್ದರು.

loading...