ಹಿಂಡಲಗಾ ಕಾರಾಗೃಹ ಸಿಬ್ಬಂದಿಗಳಿಂದ ಪ್ರತಿಭಟನೆ

0
178
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:13 ಬೆಂಗಳೂರಿನ ಮಹಿಳಾ ಕಾರಾಗೃಹ ಡಿಜಿ ಸತ್ಯನಾರಾಯಣ ಬಗ್ಗೆ ಸುಳ್ಳು ಆರೋಪ ಮಾಡಲಾಗಿದೆ ಅಲ್ಲದೆ ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿ‌ ಗುರುವಾರ ಹಿಂಡಲಗಾ ಕಾರಾಗೃಹದ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ಡಿಜಿ ಸತ್ಯನಾರಾಯಣ ಅವರು ಧನಾತ್ಮಕವಾದ ಕಾರ್ಯಗಳನ್ನ ಮಾಡಿದ್ದಾರೆ. ಕೈದಿಗಳ ಮನಪರಿವರ್ತನೆ ವಿಚಾರ ಹಾಗೂ ಸಿಬ್ಬಂದಿಗಳ ಸುಧಾರಣೆ ವಿಚಾರವಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.ಸತ್ಯನಾರಾಯಣ ಅವರು ಕಾರಾಗೃಹ ಇಲಾಖೆ ಸಮಗ್ರ ಏಳಿಗೆಗೆ ಶ್ರಮಿಸಿದ್ದಾರೆ.ಸತ್ಯನಾರಾಯಣ ಅವರ ವರ್ಚಸ್ಸು ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸಿದರು.
ಡಿಜಿ ಸತ್ಯನಾರಾಯಣ ಅವರ ಮೇಲಿನ ಆರೋಪ ಮುಕ್ತವಾಗುವ ವರೆಗೂ ಹೋರಾಟ ಮಾಡ್ತಿವಿ.ರಾಜ್ಯಪಾಲರಿಗೆ ನಾವು ಮನವಿ ಸಲ್ಲಿಸುತ್ತೇವೆ ಎಂದು ಕಾರಾಗೃಹದ ಮುಖ್ಯ ಅಧಿಕ್ಷಕ ಶೇಷ ಹೇಳಿದ್ದಾರೆ.                                                                                                                                                                                                                                               https://www.youtube.com/channel/UCdlzj2Q5ixPyKajw_NJYyEA?sub_confirmation=1

loading...