ಹಿಂದೂ ನಾಯಕರ ಹತ್ಯೆ ಪ್ರಕರಣ ಎನ್‍ಐಗೆ ಒಪ್ಪಿಸುವಂತೆ ಮನವಿ

0
27
loading...

ಕನ್ನಡಮ್ಮ ಸುದ್ದಿ-ಕುಮಟಾ: ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ನಾಯಕರುಗಳ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಲು ಎನ್‍ಐಗೆ ಒಪ್ಪಿಸುವ ಜೊತೆಗೆ ವಿಶೇಷ ತುರ್ತು ಕೋರ್ಟ್ ಸ್ಥಾಪಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಹಿಂದು ಆಂದೋಲನ ಸಮಿತಿಯ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೇಘರಾಜ ನಾಯ್ಕ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಎರಡು ವರ್ಷಗಳಿಂದ ಒಟ್ಟು 24 ಹಿಂದು ನಾಯಕರುಗಳ ಹತ್ಯೆಯಾಗಿದೆ. ಯಾವುದೆ ಪ್ರಕರಣವನ್ನು ಈತನಕ ಸಮರ್ಪಕವಾಗಿ ತನಿಖೆ ಮಾಡಿಲ್ಲ. ಶರತ ಮಡಿವಾಳ ಪ್ರಕರಣ ಸೇರಿದಂತೆ ಹತ್ಯೆಗೊಳಗಾದ ಹಿಂದು ನಾಯಕರ ಪ್ರಕರಣವನ್ನು ಸೂಕ್ತ ತನಿಖೆಗಾಗಿ ಎನ್‍ಐಗೆ ಒಪ್ಪಿಸ ಬೇಕು.
ಅಲ್ಲದೆ ರಾಜ್ಯದ ಮತಾಂಧ ಸಂಘಟನೆ ಪಿಎಫ್‍ಐ ಹಾಗೂ ಕೆಎಫ್‍ಡಿಯ ಮೇಲಿದ್ದ 175 ದಂಗೆಯ ಪ್ರಕರಣವನ್ನು ಕ್ಯಾಬಿನೇಟ್‍ನಲ್ಲಿ ಹಿಂಪಡೆಯಲಾಗಿದೆ. ಇದಕ್ಕೆ ಪೆÇಲೀಸ್ ಇಲಾಖೆ ವಿರೋಧ ವ್ಯಕ್ತಪಡಿಸಿದರೂ ಪ್ರಯೋಜನವಾಗಿಲ್ಲ. ದಕ್ಷ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗುತ್ತಿದೆ. ಇಂಥ ದುರಾಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆಯಲ್ಲಿ ಹಿಂದು ಆಂದೋಲನ ಸಮಿತಿಯ ಪ್ರಮುಖರಾದ ಸತೀಶ ಶೇಟ್, ಗೀತಾ ಶಾನಭಾಗ, ರಮಾ ಪ್ರಭು, ಗೀತಾ ನಾಯ್ಕ, ಜಾನಕಿ ನಾಯಕ, ಉಮಾ ಪೈ, ಸಂದೀಪ ಭಂಡಾರಿ, ರಾಘವೇಂದ್ರ ಶೇಟ್, ಪ್ರಶಾಂತ ಶೆಟ್ಟಿ, ನಾಗೇಂದ್ರ ಆಚಾರಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...