ಹಿಂದೂ ಮಹಾಸಾಗರದಲ್ಲಿ ಚೀನಾ ಸಮರ ನೌಕೆ

0
49
loading...

ನವದೆಹಲಿ:- ಭಾರತ -ಚೀನಾ ನಡುವೆ ದೊಕ್ಲಾಮ್ ಗಡಿಭಾಗದ ಬಿಕ್ಕಟ್ಟು ಎರಡು ದೇಶಗಳ ಸೈನ್ಯವನ್ನು ತುದಿಗಾಲ ಮೇಲೆ ನಿಲ್ಲಿಸಿರುವಂತೆಯೇ ಚೀನಾ ತನ್ನ ಸಮರ ನೌಕೆಯನ್ನು ಹಿಂದೂ ಮಹಾಸಾಗರ ವಲಯಕ್ಕೆ ಇಳಿಸಿದೆ.
ಚೀನಾದ ನೌಕಾ ಪಡೆಯ ಚಲನ ವಲನಗಳನ್ನು ಗಮನಿಸಲು ಭಾರತೀಯ ನೌಕಾ ಪಡೆ ತನ್ನ ಸಮರ ನೌಕೆ ಮತ್ತು ಕರಾವಳಿ ನಿಗಾ ವಿಮಾನಗಳನ್ನು ಹಿಂದೂ ಮಹಾಸಾಗರ ವಲಯದಲ್ಲಿ ನಿಯೋಜಿಸಿದೆ.
ದಕ್ಷಿಣ ಏಷ್ಯಾದಲ್ಲಿ ಭಾರಕ ತನಗೆ ಸರಿಸಮನಾಗಿ ಅಭಿವೃದ್ಧಿಗೊಳ್ಳುತ್ತಿರುವುದನ್ನು ಸಹಿಸದ ಚೀನಾ ಗಡಿಯಲ್ಲಿ ಭಾರತದ ವಿರುದ್ಧ ಕಾಲು ಕೆರೆಯುತ್ತಿದೆ. ಇತ್ತೀಚೆಗೆ ದೊಕ್ಲಾಮ್ ಗಡಿಯಲ್ಲಿ ಇದೇ ಆದದ್ದು. ಚೀನಾದ ಆಕ್ರಮಣಕಾರಿ ಪಡೆಯನ್ನು ಎದುರಿಸಲು ಭಾರತ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಯೋಧರನ್ನು ನಿಯೋಜಿಸಿದೆ. ಇದರ ಜೊತೆಗೆ ಯೋಧರಿಗೆ ಅಗತ್ಯವಿರುವ ಶಸ್ತ್ರಾಸ್ತ್ರ ಮತ್ತು ಇತರೆ ಸಾಮಗ್ರಿಗಳನ್ನು ಗಡಿ ವಲಯಕ್ಕೆ ತಲುಪಿಸುವ ಕಾರ್ಯ ಕೈಗೊಂಡಿದೆ.
1962ರ ನಂತರದಲ್ಲಿ ಭಾರತ – ಚೀನಾ ನಡುವೆ ಗಡಿಯ ವಲಯದಲ್ಲಿ ಇಷ್ಟೊಂದು ಉದ್ವಿಗ್ನತೆ ಉಂಟಾಗಿರಲಿಲ್ಲ. ಎರಡು ದೇಶದ ನಾಯಕರು ಈ ಮಟ್ಟದಲ್ಲಿ ಮಾತಿನ ಸಮರಕ್ಕೆ ಇಳಿದಿರಲಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾರತ – ಚೀನಾ ನಡುವಿನ ಪರಸ್ಪರ ಗಡಿ ಬಿಕ್ಕಟ್ಟು ಉಲ್ಬಣಿಸಲು ಎರಡೂ ದೇಶಗಳ ನಡುವಿನ ಇತ್ತೀಚಿನ ವಿದ್ಯಮಾನಗಳೂ ಕಾರಣವಾಗಿದೆ. ಭಾರತಕ್ಕೆ ಎನ್.ಎಸ್.ಜಿ. ಸದಸ್ಯತ್ವ ಸಿಗಲು ಚೀನಾ ಅಡ್ಡಗಾಲು ಹಾಕಿರುವುದು, ಮುಂಬೈ ದಾಳಿಯ ರೂವಾರಿ ಸೈಯದ್ ಸಲಾವುದ್ದೀನ್ ರಕ್ಷಣೆಗೆ ಚೀನಾ ನಿಂತಿರುವುದು ಚೀನಾ ವಿರುದ್ಧ ಭಾರತದ ಅಸಮಾಧಾನ ಕಾರಣವಾಗಿದೆ.

loading...