ಅಂತರಾಜ್ಯ ನಾಲ್ಕು ಕಳ್ಳರ ಅಂದರ್

0
39
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ನಿಪ್ಪಾಣಿ ಪಟ್ಟಣದ ಹೊರವಲಯ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಲು ಯತ್ನಿಸುತ್ತಿದ್ದ, ನಾಲ್ವರನ್ನು ಬಂಧಿಸುವಲ್ಲಿ ನಿಪ್ಪಾಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಕರಣಸಿಂಗ್ ಗಗನಸಿಂಗ್ ಟಾಕ, ಕುಲದೀಪಸಿಂಗ್ ಗಗನಸಿಂಗ್ ಟಾಕ, ಬಾಲಾಜಿ ಬಾಬುರಾವ ಘಟಕೆ ಮತ್ತು ಸಂಜಯ ಚಂದ್ರಕಾಂತ ಪಾತರಕರ ಬಂಧಿತರು. ಶಸ್ತ್ರಗಳ ಸಹಿತ ಕಳ್ಳತನ ಮಾಡುತ್ತಿದ್ದರೂ ಸುಧಾರಿತ ಗಸ್ತು ಸದಸ್ಯ ನೀಡಿದ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿದ್ದಾಗ ರಿವಾಲ್ವರ್ ತೋರಿಸಿ ಹೆದರಿಸಲು ಪ್ರಯ್ನಸಿದ್ದ ಕಳ್ಳರನ್ನು ಸಾರ್ವಜನಿಕರ, ಪಿಎಸ್‍ಐ ಮತ್ತು ಪೊಲೀಸರು ಶಸ್ತ್ರಗಳ ಮೂಲಕ ಹೆದ್ದರಿಸಿ ಕಳ್ಳರನ್ನು ಬಂಧಿಸಿದ್ದಾರೆ. ಅವರಿಂದ ಒಂದು ಸ್ಕಾರ್ಪಿಯೋ, ಬೆಳ್ಳಿ ತಟ್ಟೆ ಮತ್ತು ಶಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಿಪ್ಪಾಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...