ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಅವಶ್ಯ ಃ ಸುರೇಶ ಮಾರಿಹಾಳ

0
39
loading...

ಚನ್ನಮ್ಮ ಕಿತ್ತೂರು ಃ ಕಣ್ಣಿನ ಬಗ್ಗೆ ಜನರಲ್ಲಿ ಮಾಹಿತಿ ಕೊರತೆಯಿದೆ. ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಸುರೇಶ ಮಾರಿಹಾಳ ಹೇಳಿದರು. ತಾಲೂಕಿನ ಜಮಳೂರು ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜೈ ಹನುಮಾನ ಗೆಳಯರ ಬಳಗ ಹಾಗೂ ಹುಬ್ಬಳ್ಳಿಯ ಅಶೋಕ ಆಸ್ಪತ್ರೆಯ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನ ಕಣ್ಣಿನ ಪೊರೆಯಿಂದ ಬಳಲುತ್ತಿದ್ದಾರೆ. ಮಾಹಿತಿ ಕೊರತೆಯಿಂದ ಚಿಕಿತ್ಸೆಗೆ ಹಿಂದೆಟ್ಟು ಹಾಕುತ್ತಿದ್ದಾರೆ ಆದ ಕಾರಣ ಗ್ರಾಮದಲ್ಲಿ ಈ ಶಿಭಿರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಹನುಮಂತ ಕೊಟಬಾಗಿ ಮಾತನಾಡಿ, ಆರೋಗ್ಯದ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ನೇತ್ರ ಚಿಕಿತ್ಸಾ ಶಿಬಿರಗಳು ಸಹಕಾರಿ ಸೇವಾ ಮನೋಭಾವದಿಂದ ವೈದರು ಹಾಗೂ ಕಣ್ಣಿನ ಆಸ್ಪತ್ರೆಯವರು ಸಹಕಾರದಿಂದ ಗ್ರಾಮಗಳಲ್ಲಿ ಈ ರೀತಿಯ ಉಚಿತ ಶಿಬಿರಗಳನ್ನು ನಡೆಸುವಂತಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಅಶೋಕ ಬಂಗಾರಶೆಟ್ಟರ ಮಾತನಾಡಿ, ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ನಡೆಸುವದಾಗಿ ತಿಳಿಸಿದರು. ಧಾರವಾಡ ಗ್ರಾಮೀಣ ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು. ಡಾ.ವರ್ಷಾ ಬಂಗಾರಶೆಟ್ಟರ, ಚನ್ನಬಸಪ್ಪ ಮೊಖಾಶಿ, ವೆಂಕನಗೌಡ ಪಾಟಿಲ, ಜಿ.ಪಂ. ಸದಸ್ಯೆ ಬಸವ್ವ ಕೊಲಕಾರ, ಉಳವಪ್ಪ ಉಳ್ಳೆಗಡ್ಡಿ, ಬಸನಗೌಡ ಪಾಟೀಲ ಜೈ ಹನುಮಾನ ಗೆಳಯರ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

loading...