ಈಜುಗೊಳ ಪುನಃ ಪ್ರಾರಂಭಿಸಲು ಸಚಿವೆ ಉಮಾಶ್ರೀ ಸೂಚನೆ

0
28
loading...

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಅಂತರರಾಷ್ಟ್ರೀಯ ಮಟ್ಟದ ಆಧುನಿಕ ವ್ಯವಸ್ಥೆಯ ಈಜುಗೊಳ ಕಳೆದ ಹಲವು ದಿನಗಳಿಂದ ತಟಸ್ಥಗೊಂಡಿದ್ದು, ಕೂಡಲೇ ಅಡತಡೆಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ತಾಂತ್ರಿಕ ಸಲಹೆ ಪಡೆದು ದುರಸ್ಥಿಗೊಳಿಸಿ ಮರು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಸೂಚಿಸಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸಭಾಭವನದಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಜುಗೊಳ ಕುರಿತು ತಾಂತ್ರಿಕ ಸಲಹೆ ಪಡೆಯುವದರ ಮೂಲಕ ಒಂದು ತಿಂಗಳೊಳಗಾಗಿ ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿ ಸಮಿತಿಯಲ್ಲಿ ಅನುಮೋದನೆ ಪಡೆದು ದುರಸ್ಥಿ ಕಾರ್ಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು. ಅಧಿಕಾರಿಗಳು ಯಾವುದೇ ರೀತಿಯ ಸಬೂಬು ಹೇಳದೇ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದರು. ಜಿಲ್ಲೆಯಲ್ಲಿ ಕುಸ್ತಿ ಕ್ರೀಡೆ ಪ್ರಶಿದ್ದವಾಗಿದ್ದು, ತರಬೇತಿಗೆ ಯೋಗ್ಯವಾದ ಕುಸ್ತಿ ಮೈದಾನ ನಿರ್ಮಾಣಕ್ಕೆ ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿ ಕೊಟ್ಟಲ್ಲಿ ಸಮಿತಿಯಿಂದ ಮಂಜೂರಾತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮೈದಾನವನ್ನು ಮೇಲ್ದರ್ಜೆ ಕಾರ್ಯಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಕ್ರೀಡಾಂಗಣದಲ್ಲಿ ಒಳ ಬದಿಯಲ್ಲಿ ಈಗಾಗಲೇ ಸ್ಕೇಟಿಂಗ್ ಅಂಕಣವಿದ್ದು ಅದರಲ್ಲಿ ದ್ವೀಕ್ರೀಡೆಗಳಿಗೆ ಅನುಕೂಲವಾಗುವಂತೆ ಸ್ಕೇಟಿಂಗ ಮತ್ತು ಬಾಸ್ಕೇಟ್ ಬಾಲ್ ಅಂಕವಣವನ್ನು ನಿರ್ಮಿಸುವಂತೆ ಕ್ರೀಡಾಪಟುಗಳು ಮನವಿ ಸಲ್ಲಿಸಿದ್ದರಿಂದ ಗನನಗೆ ತೆಗೆದುಕೊಂಡು ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಕಾರ್ಯಕೈಗೊಳ್ಳುವಂತೆ ಸೂಚಿಸಲಾಯಿತು. ಎಚ್.ವಾಯ್.ಮೇಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಷ್ಯಂತ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

loading...