ಉತ್ತರ ಕೊರಿಯಾಗೆ ಟಾಂಗ್ ಕೊಟ್ಟ ಟ್ರಂಪ್

0
29
loading...

ವಾಷಿಂಗ್ಟನ್: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಪರಮಾಣು ಯುದ್ಧ ನಡೆಯುವ ಸಾಧ್ಯತೆಗಳಿವೆ ಎಂಬ ಭೀತಿಯ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾದ ಯಾವುದೇ ಅಣ್ವಸ್ತ್ರಕ್ಕೆ ಹೆದರುವುದಿಲ್ಲ, ಅವರ ಬೆದರಿಕೆಗಳನ್ನು ಮಟ್ಟಹಾಕುವ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕೊರಿಯಾ ಬೆದರಿಕೆಗಳ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಉತ್ತರ ಕೊರಿಯಾ ಮೂರ್ಖತನದಿಂದ ನಡೆದುಕೊಂಡಲ್ಲಿ, ಯುದ್ಧಕ್ಕೆ ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಸೇನೆ ಕಾರ್ಯಾಚರಣೆಗೆ ಸಂಪೂರ್ಣ ಸಿದ್ಧತೆ ನಡೆದಿದೆ. ಕಿಮ್ ಜೊಂಗ್ ಉನ್ ಈಗ ಬೇರೆ ದಾರಿ ಹಿಡಿಯುತ್ತಾರೆಂಬ ಭರವಸೆ ಹೊಂದಿದ್ದೇನೆಂದು ಹೇಳಿಕೊಂಡಿದ್ದಾರೆ.

loading...