ಒಬಿಸಿ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಅರಸ್ ಕೊಡುಗೆ  ಅಪಾರ

0
28
loading...

ಬೆಳಗಾವಿ: ದೇವರಾಜ ಅರಸ ಅವರು ಸಮಾಜದಲ್ಲಿ ಹಿಂದುಳಿದ ವರ್ಗಗಳು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಬರಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಲು ನೆರವಾದರು ಎಂದು ಕೆಎಲ್‍ಇ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್ ಜಿ. ನಂಜಪ್ಪನವರ ಅಭಿಪ್ರಾಯ ಪಟ್ಟರು.
ನಗರದ ಕೆಎಲ್‍ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ 102 ನೆಯ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು. ಹಿಂದುಳಿದ ವರ್ಗಗಳ ಯುವಕರು ಶಿಕ್ಷಣ ಕಲಿತು ಉದ್ಯೋಗ ಪಡೆಯಲು ಸಹಕಾರಿಯಾದರು.
ಅಲ್ಲದೇ ಸಾಕಷ್ಟು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರು. ದೇವರಾಜ ಅರಸ ಭೂಸುಧಾರಣಾಕಾಯ್ದೆಯ ಮೂಲಕ “ಉಳ್ಳುವವನೇ ಹೊಲದೊಡೆಯ” ನೀತಿಯನ್ನು ಜಾರಿಗೆ ತಂದರು. ಕರ್ನಾಟದಲ್ಲಿರುವ ಕಾಡನ್ನು ಸಂರಕ್ಷಣೆ ಮಾಡುವದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಅಮೂಲ್ಯವಾದ ಕಾಡು ಸಂರಕ್ಷಣೆಯಾಗುವಂತೆ ಮಾಡಿದರು.
ಜೀತಪದ್ಧತಿಯನ್ನು ಹೋಗಲಾಡಿಸುವುದು, ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವುದು ಮುಂತಾದ ಜನಪರವಾದ ಕಾರ್ಯಕ್ರಮದ ಮೂಲಕ ಜನಮಾನಸದಲ್ಲಿ ಅರಸ್ ಶಾಶ್ವತವಾಗಿ ಉಳಿದಿದ್ದಾರೆ. ಯುವಕರು ದೇವರಾಜ ಅರಸ ಅವರ ಸಮಾಜಮುಖಿ ಕಾರ್ಯಗಳನ್ನು ಅಭ್ಯಸಿಸಿ, ದೇವರಾಜ ಅರಸ ಅವರಂತೆ ಸಮಾಜಕ್ಕೆ ಸತ್ಕಾರ್ಯಗಳನ್ನು ಮಾಡುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು.
ದೇವರಾಜ ಅರಸ ಅವರ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಎಸ್ ಬಿ. ಬನ್ನಿಮಟ್ಟಿ ಸ್ವಾಗತಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಸುಜಾತಾ ಕೆ. ವಂದಿಸಿದರು. ಗಣಕವಿಜ್ಞಾನದ ಉಪನ್ಯಾಸಕಿ ಮಿಸ್. ಶಿಲ್ಪಾ ಪಾಟೀಲ ನಿರೂಪಿಸಿದರು.

loading...