ಕಳ್ಳತನ ಮಾಡುತ್ತಿದ್ದ ಓರ್ವ ಸೆರೆ

0
15
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ನಗರದ ಸಾಂಬ್ರಾ ಹತ್ತಿರ ಜೇಡಗಲ್ಲಿ ಚಿನ್ನ ಕಳ್ಳತನ ಮಾಡಿದ್ದ ಓರ್ವನನ್ನು ರೈಲ್ವೆ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಜೇಡಗಲ್ಲಿ ನಿವಾಸಿ ಯೋಗೇಶ ಪಟದಯ್ಯಾ ಹಿರೇಮಠ ಬಂಧಿತ ವ್ಯಕ್ತಿ. ಇತನಿಂದ 253 ಗ್ರಾಂ ಬಂಗಾರದ ಆಭರಣಗಳು ಮತ್ತು 50 ಗ್ರಾಂ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ರೈಲ್ವೆ ಸಿಪಿಐ ಎಸ್.ಎಸ್ ಕೌಜಲಗಿ, ಪಿಎಸ್‍ಐಗಳಾದ ಬಿ.ಟಿ ವಾಲಿಕಾರ, ಶಿವಕುಮಾರ ಸಿಬ್ಬಂಧಿಗಳಾದ ಸಂಗಪ್ಪ ಕೋಟ್ಯಾಳ, ಪ್ರಭು ಗೋಣೆ, ಸುರೇಂದ್ರ ವಿಭೂತಿ, ನಾಗರಾಜ ತಿಪ್ಪನ್ನವರ, ರವಿಂದ್ರ ರಜಪೂತ, ಹಣಮಂತ ತುಂಗಳ ಭಾಗಿಯಾಗಿದ್ದರು. ಈ ಕುರಿತು ರೈಲ್ವೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...