ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಕಾರ್ಯಕರ್ತರು ಶ್ರಮಿಸಿ: ಅಣ್ಣಾಸಾಹೇಬ

0
22
loading...

ಬೈಲಹೊಂಗಲ: ಕರ್ನಾಟಕ ರಾಜ್ಯ ಕಾಂಗ್ರೆಸ್ ಮುಕ್ತವಾಗಿಸಲು ಮತ್ತು ಬಿ.ಜೆ.ಪಿ ರಾಷ್ಟ್ರೀಯ ನಾಯಕರ 150+ ಕರ್ನಾಟಕ ಶಾಸಕರ ಆಯ್ಕೆಗೆ ವಿಸ್ತಾರಕ ಕಾರ್ಯಕ್ರಮ ಅತ್ಯಂತ ಫಲಕಾರಿಯಾಗಿದೆ ಎಂದು ಬೈಲಹೊಂಗಲ ಮಂಡಲ ವಿಸ್ತಾರಕ ಪ್ರಭಾರಿಗಳಾದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.
ಪಟ್ಟಣದ ಬಿ.ಜೆ.ಪಿ ಕಛೇರಿಯಲ್ಲಿ ಪಂ. ದೀನದಯಾಳ ಉಪಾಧ್ಯಾಯರ ಕಾರ್ಯ ವಿಸ್ತಾರ ಯೋಜನೆ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿ ಕೇಡರ್ ಬೇಸ್ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, 3ವರ್ಷದಿಂದ ಕಳಂಕ ರಹಿತ ಭ್ರಷ್ಟಾಚಾರ ಮುಕ್ತವಾದ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮತ್ತು ಜನಪರ ಯೋಜನೆಗಳನ್ನು ದೇಶದ ಪ್ರತಿಯೋಬ್ಬ ಪ್ರಜೆಗೂ ತಲುಪಿಸಲು ಹಾಕಿಕೊಂಡ ವಿಸ್ತಾರಕ ಕಾರ್ಯಕ್ರಮ ದೇಶದಲ್ಲಿ ಯಶಸ್ವಿಯಾಗಿ ಜರಗುತ್ತಿರುವದರಿಂದ ಕಾಂಗ್ರೆಸಿಗರ ನಿದ್ದೆಗೇಡು ಮಾಡುತ್ತಿದೆ. ‘ಅನ್ನಭಾಗ್ಯ’ ಯೋಜನೆಯ ಪ್ರತಿ ಕೆ.ಜಿ ಅಕ್ಕಿಗೆ ಕೇಂದ್ರ ಸರ್ಕಾರದ ರೂ. 28 ರಂತೆ ನೀಡುತ್ತಿರುವಾಗ ಕೇವಲ ರೂ. 3 ನೀಡಿರುವ ರಾಜ್ಯ ಸರ್ಕಾರ ತನ್ನದೇ ಭಾಗ್ಯವೆಂದು ಜಂಬ ಕೊಚ್ಚಿಕೊಂಡು ಜನರಿಗೆ ತಪ್ಪು ಕಲ್ಪನೆ ನೀಡುತ್ತಿದೆಯೆಂದರು. ಇಂತಹ ಅನೇಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಗುರುತರವಾದ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕಾರ್ಯಕರ್ತರು ವಿಸ್ತಾರಕ ಯೋಜನೆಯ ಯಶಸ್ವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ ಬಿ.ಜೆ.ಪಿ.ಯಲ್ಲಿ ಕಾರ್ಯಕರ್ತರೇ ನಿಜವಾದ ಆಸ್ತಿ, ಪಕ್ಷದಲ್ಲಿ ತತ್ವ ಸಿದ್ಧಾಂತಗಳೆ ಆಧಾರ ಸ್ತಂಭಗಳಾಗಿವೆ. ಬಿಜೆಪಿ ಯಲ್ಲಿ ಕೆಲವು ವಿನಾಕಾರಣ ಕೆ.ಜೆ.ಪಿ-ಬಿ.ಜೆ.ಪಿ.ಯೆಂದು ಭಿನ್ನಾಭಿಪ್ರಾಯ ಮೂಡಿಸುತ್ತಿರುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಜನಪರ ಯೋಜನೆಗಳಿಂದ ನಾಯಕರು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲೆಯಲ್ಲಿ 8 ಸ್ಥಾನಗಳನ್ನು ಗೆಲ್ಲುವತ್ತ ಕಾರ್ಯ ನಿರ್ವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಟಿಕೇಟ್ ಬಗ್ಗೆ ಗೊಂದಲ ಮೂಡಿಸುವ ವ್ಯಕ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಬಿ.ಜೆ.ಪಿ ಕಾರ್ಯವಿಸ್ತಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಬೈಲಹೊಂಗಲ ಮಂಡಲದ ಜಿಲ್ಲಾ ಪಂಚಾಯತಿ ಕ್ಷೇತ್ರಗಳಾದ ಹೊಸೂರ, ಬುಡರಕಟ್ಟಿ, ಬೆಳವಡಿ, ಸಂಗೋಳ್ಳಿ, ಕರೀಕಟ್ಟಿ, ಮುರಗೋಡ ಮತ್ತು ಬೈಲಹೊಂಗಲ ನಗರದ ಉಸ್ತುವಾರಿಗಳಾದ ತಮ್ಮ ಅನಿಸಿಕೆಗಳನ್ನು ಮಡಿವಾಳಪ್ಪಾ ಹೋಟಿ, ಮಹೇಶ ಹರಕುಣಿ, ಎಫ್. ಎಸ್. ಸಿದ್ಧನಗೌಡರ, ಆಯ್. ಎಲ್ ಪಾಟೀಲ, ಮುರುಗೇಶ ಗುಂಡ್ಲೂರ, ಶ್ರೀಶೈಲ ಯಡಳ್ಳಿ 15 ದಿನಗಳ ವಿಸ್ತಾರಕ ಕಾರ್ಯದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಗೂಳಪ್ಪ ಹೊಸಮನಿ, ಮುರಗೋಡ ಜಿ.ಪಂ ಸದಸ್ಯ ಬಸವರಾಜ ಬಂಡಿವಡ್ಡರ, ಬಸನಗೌಡ ಪಾಟೀಲ, ನಿಂಗಪ್ಪ ಚೌಡಣ್ಣವರ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ವಿರೇಶ ಹೊಳೆಪ್ಪನವರ, ತಾ.ಪಂ ಸದಸ್ಯ ಸುರೇಶ ಮ್ಯಾಕಲ, ರಾಯನಾಯ್ಕ ಚೇರಮನ್ನರು, ಬಸನಾಯ್ಕ ಮಲ್ಲೂರ, ಫಕ್ಕೀರಪ್ಪಾ ಭೈರಣ್ಣವರ, ಬಸವರಾಜ ದುಗ್ಗಾಣಿ, ಮಹಾಂತೇಶ ಹರಕುಣಿ, ಸಂಜಯ ಗಿರೆಪ್ಪಗೌಡ್ರ, ಮಲ್ಲಿಕಾರ್ಜುನ ವಕ್ಕುಂದಮಠ, ಶಿವಾನಂದ ಹಿರೇಮಠ, ಯಲ್ಲಪ್ಪ ನರೇಂದ್ರ, ಕುಮಾರಸ್ವಾಮಿ, ರಮೇಶ ಯಲ್ಲಪ್ಪಗೌಡರ, ಮಂಜು ಕಾಡಣ್ಣವರ, ಆಸೀಫ ಗೋವೆ, ಅದೃಷ ಶೀಗಿಹಳ್ಳಿ, ಮಲ್ಲಿಕಾರ್ಜುನ ದೇಸಾಯಿ, ವಿನೋದ ಭಾಂವಿಹಾಳ, ಶ್ರೀಶೈಲ ಬೋರಕನವರ, ಆನಂದ ಮೂಗಿ ಹಾಗೂ ನೂರಾರು ವಿಸ್ತಾರಕ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಕಲಾ ಮತ್ತು ಸಾಂಸ್ಕøತಿಕ ಪ್ರಕೋಷ್ಠಾದ ಸಂಚಾಲಕರಾದ ಸಿ. ಕೆ. ಮೆಕ್ಕೇದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವದತ್ತಿ ಎಪಿಎಮ್‍ಸಿ ಸದಸ್ಯ ಎಫ್. ಎಸ್ ಸಿದ್ಧನಗೌಡರ ಕಾರ್ಯಕ್ರಮ ನಿರೂಪಿಸಿದರು. ಬಾಳನಗೌಡ ಪಾಟೀಲ ವಂದಿಸಿದರು.

loading...