ಕೃಷಿಮಾರುಕಟ್ಟೆ ನೀತಿ ವಿರೋಧಿಸಿ ನೀಡಿದ್ದ ಬಂದ್‍ಗೆ ನೀರಸ ಪ್ರತಿಕ್ರಿಯೆ

0
41
loading...

ಕುಷ್ಟಗಿ: ಕೇಂದ್ರ ಸರಕಾರದ ಇ-ಪೇಮೆಂಟ್ ವಿರೋಧಿಸಿ ಎಪಿಎಂಸಿ ವರ್ತಕರು ಕುಷ್ಟಗಿ ಬಂದ್‍ಗೆ ಕರೆಯು ಅಷ್ಟೇನು ಯಶಸ್ಸು ಕಾಣದೇ ಅಂಗಡಿ ಮುಂಗಟ್ಟುಗಳು ಎಂದಿನಂತೆ ತಮ್ಮ ಕಾರ್ಯದಲ್ಲಿ ನಿರತರಾಗಿ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನರಗದಲ್ಲಿ ಇರುವ ಅಂಗಡಿ-ಮುಂಗಟ್ಟುಗಳು ಎಂದಿನಂತೆ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗಿದ್ದವು ಶರಣಬಸೇಶ್ವರ ವರ್ತಕರ ಸಂಘದ ನೇತೃತ್ವದಲ್ಲಿ ಹನಮನಾಳ, ಹನಮಸಾಗರ, ದೋಟಿಹಾಳ, ಮುದೇನೂರು, ತಾವರಗೇರಾ ಹಾಗೂ ಕುಷ್ಟಗಿಯ ವರ್ತಕರು ನಗರದ ರೇಣುಚಾರ್ಯರ ಮಂಗಲ ಭವನದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮುಖಾಂತರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ ಕಚೇರಿಯಲ್ಲಿ ಸೇರಿಕೊಂಡು ತಹಶೀಲ್ದಾರ ಎಂ.ಗಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶರಣಬಸವೇಶ್ವರ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಳ್ಳಿಮಠ ಸರಕಾರ ಹೊಸದಾಗಿ ಜಾರಿ ತಂದಿರುವ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯಂತೆ ಎ.ಪಿ.ಎಂ.ಸಿಗಳಲ್ಲಿ ರೈತರಿಂದ ಟೆಂಡರ್ ಮೂಲಕ ಖರೀದಿದಾರರು, ದಲಾಲರು ಯಾವುದೇ ಧಾನ್ಯ ಖರೀದಿಸಿದ 24 ಗಂಟಿಯೊಳಗೆ ಆಯಾ ಎಪಿಎಂಸಿಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು ರೈತರಿಗೆ ದಲಾಲರು ಅಥವಾ ಖರೀದಿದಾರರು ನೇರವಾಗಿ ಹಣ ನೀಡುವಂತಿಲ್ಲ ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿದ್ದು ಇದನ್ನು ಬಲವಾಗಿ ವಿರೋದಿಸಲಾಗುತ್ತಿದೆ ಎಂದರು. ಇದೇ 19 ರಂದು ಡಾವಣಗೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ವಾಣಿಜ್ಯ ಉದ್ಯೋಮ ಸಂಸ್ಥೆ ಬೆಂಗಳೂರು ಮತ್ತು ಹುಬ್ಬಿಳ್ಳಿ ಇವರ ಕರೆಯಮೇರಿಗೆ ರಾಜ್ಯ ಬಂದ್ ಕರೆ ನೀಡಲಾಗಿದೆ. ಸರಕಾರ ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಚಿವರು ಜಾರಿಗೆ ತರಲಾದ ಕಾಯ್ದೆಯನ್ನು ರದ್ಧು ಮಾಡಬೇಕು ಇಲ್ಲವಾದರೆ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಸಿಎಂ ಅವರಿಗೆ ಆಗ್ರಹಿಸಿದರು. ರಾಜ್ಯಾದ್ಯಂತ ಎಪಿಎಂಸಿ ಮಾರಿಕಟ್ಟೆಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಬೇಡವೇ ಬೇಡ (ರಾಷ್ಟ್ರೀಯ ಇ-ಮಾರ್ಕೆಟಿಂಗ್ ಸರ್ಮೀಸ್ ಸಂಸ್ಥೆ)ಗೆ ನೀಡಲಾಗಿದೆ ಇದು ಅವಶ್ಯಕತೆ ಇರುವುದಿಲ್ಲ ಸೆನ್ ಜಾರಿಯಾಗಬೇಕು ಕೆಲವೊಂದು ರಾಜ್ಯಗಳಲ್ಲಿ ಶೇ. 085, ಶೇ.075.ಹಾಗೂ ಶೇ 1.00 ಇದೆ.ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಶೇ. 1.5 ರಷ್ಟು ಇರುತ್ತದೆ ಆದರಿಂದ ಒಂದೇ ದರದ ಸೆನ್ ಆಕರಣೆ ಮಾಡುವಂತಾಗಬೇಕು ನ್ಯಾಯವಿತವಾದ ಬೇಡಿಕೆಗಳನ್ನು ಈಡೇರಿಸಲು ಸತತವಾಗಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಅನಿರ್ಧೀಷ್ಟ ಅವಧಿ ಮುಷ್ಕರದಲ್ಲಿದ್ದು ಹೀಗಾಗಲೇ ಸರಕಾರ ಇಂದು ಒಂದು ಸುತ್ತಿನ ಮಾತುಕತೆಗೆ ಕರೆದಿತ್ತು. ಆದರೆ ಮಾತುಕಥೆ ವಿಫಲವಾಗಿದೆ. ದಷ್ಟು ಬೇಗನೆ ರೈತರ ವರ್ತಕರ ಹಾಗೂ ಶ್ರಮೀಕ ಸಮಾಜದ ಸಾಮರಸ್ಯದ ಹಿತದೃಷ್ಟಿಯಿಂದ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಲಿಂಗಶಟ್ಟರ, ಸಂಗಮೇಶ, ಸಿದ್ದಲಿಂಗಪ್ಪ ಕಲಕಬಂಡಿ, ಚಂದ್ರಶೇಖರ ಕುಡತನಿ, ಪ್ರಭಕಾರ ಕಂದಕೂರು, ಹುಲ್ಲಪ್ಪ ಚೂರಿ, ರಾಜಶೇಖರ, ಶ್ರೀಕಾಂತ, ಚನ್ನಪ್ಪ, ಶೇಖರಗೌಡ ಪೊಲೀಸ್ ಪಾಟೀಲ್, ದೊಡ್ಡನಗೌಡ ಪಾಟೀಲ್ ಸೇರಿದಂತೆ ಮಾರುಕಟ್ಟೆಯ ವಿವಿಧ ವರ್ತಕರು ಪಾಲ್ಗೊಂಡಿದ್ದರು.

loading...