ಗಾಂಧಿಜಿಯ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಿ

0
32
loading...

ಶಿರಹಟ್ಟಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಹೋರಾಟದ ಬದುಕನ್ನು ನೆನೆದು ಸ್ಮರಿಸಿದರಲ್ಲದೇ ಅವರ ಸತ್ಯ, ಶಾಂತಿ, ಮತ್ತು ಅಹಿಂಸೆಯ ತತ್ವ ಮತ್ತು ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಚಾರ್ಯ ಧರ್ಮಪ್ಪ ಚೌಟಕಿ ಕರೆ ನೀಡಿದರು.
ಮಂಗಳವಾರ ತಾಲೂಕಿನ ಸುಗನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಿದ 71 ನೇಯ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಸ್ವಾತಂತ್ರವನ್ನು ತಂದುಕೊಡುವಲ್ಲಿ ಹಲವಾರು ನಾಯಕರ ತಮ್ಮ ರಕ್ತವನ್ನು ಕೊಟ್ಟು ದೇಶವನ್ನು ಸ್ವಾತಂತ್ರಗೊಳಿಸುವಲ್ಲಿ ಪಣತೊಟ್ಟಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ನೂತನವಾಗಿ ಕೆಪಿಎಸ್‍ಸಿ ಪರಿಕ್ಷೇಯಲ್ಲಿ ಪಾಸ್‍ಮಾಡಿ ಎಸಿ ಹುದ್ದೆಯನ್ನು ಪಡೆದಿರುವ ಗೀತಾ ಹುಡೇದ ಮಾತನಾಡಿ, ವಿದ್ಯಾರ್ಥಿಗಳು ಕಠಿಣವಾದ ಪರಿಶ್ರಮದೊಂದಿಗೆ ಕಷ್ಟಪಟ್ಟು ಓದಿದರೆ ಕೆಎಎಸ್ ಹಾಗೂ ಐಎಎಸ್ ನಂತಹ ಉನ್ನತ ಪರಿಕ್ಷೇಯಲ್ಲಿ ತೇರ್ಗಡೆಯಾಗಿ ಉನ್ನತ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸುವಂತಾಗಬೇಕೆಂದು ವಿದ್ಯಾರ್ಥಿಗಳಲ್ಲಿ ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮವನ್ನು ಹೊಂದುವುದಲ್ಲದೇ ಸಾಧನೆಯ ಮೂಲಕ ಉನ್ನತ ಗುರಿಯನ್ನು ತಲುಪಬೇಕೆಂದು ಕರೆ ನೀಡಿದರು.
ತಾಪಂ ಮಾಜಿ ಸದಸ್ಯ ತಿಮ್ಮರಡ್ಡಿ ಅಳವಂಡಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮತ್ತು ಗುರಿಯೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವುದರೊಂದಿಗೆ ದೇಶ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಸ್ವಾತಂತ್ರ್ಯೋತ್ಸವ ದಿನಾಚರಣೆಯ ನಿಮಿತ್ಯ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಸಹ ಆಚರಿಸಲಾಯಿತು.
ಗಾಂಧೀಜಿ ವೇಷದಲ್ಲಿ ಬಂದ ಮಲ್ಲಪ್ಪ ಪೂಜಾರ ಎಂಬುವರು ಸತತವಾಗಿ ಮೂರು ತಾಸುಗಳವರೆಗೆ ನಿಂತಲ್ಲಿಯೇ ನಿಂತುಕೊಂಡು ಎಲ್ಲರ ಗಮನ ಸೆಳೆದು ದೇಶ ಪ್ರೇಮ ಮೆರೆದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗೋವಿಂದಪ್ಪ ಕೆಂಚರಡ್ಡಿ, ಅಂದಪ್ಪ ಸೋಮಣ್ಣವರ, ದೇವಪ್ಪ ಕರೆಕೆಂಚಪ್ಪನವರ, ಸೇವೆಯಲ್ಲಿರುವ ಕಂದಾಯ ನೀರೀಕ್ಷಕ ಶಂಭುಲಿಂಗ ಬಿಚ್ಚಾಲಿ. ಸಾಧನೆಗೈದ ವಿಧ್ಯಾರ್ಥಿಗಳಾದ ವಿನೋದ ಬಾಲಕ್ಕನವರ, ನೀಲಮ್ಮ ಆಡೀನ, ರೇಣವ್ವ ಶಿರಹಟ್ಟಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ರೇಖಾ ಅಳವಂಡಿ, ಮಹಾದೇವಪ್ಪ ಬಡ್ನಿ, ಸಿ ಎನ್. ಮಾಗಳಮಠ, ಜಿ ವಿ. ಕೆಂಚರಡ್ಡಿ, ದಾನಪ್ಪ ರಾಹುತ, ಸುಭಾಸಚಂದ್ರ ಬಡ್ನಿ, ವೀರನಗೌಡ್ರ ಪಾಟೀಲ, ಮಂಜುನಾಥ ಸವಣೂರ, ಮಹೇಶ ಬಡ್ನಿ, ರಾಮಣ್ಣ ವಡವಿ, ಚಂದ್ರಪ್ಪ ಜೈನರ, ಮುದಕಪ್ಪ ಭಾವನೂರ, ಮಂಜುನಾಥ ಆಡೀನ, ಶಂಕ್ರಪ್ಪ ಕುರಿ, ಶಿವಲಿಂಗಪ್ಪ ಜಕ್ಕಲಿ, ಮಲ್ಲೇಶ ಸಿದ್ದಾಪೂರ, ದುರಗಪ್ಪ ಹರಿಜನ, ಗ್ರಾಪಂ ಸದಸ್ಯರಾದ ರಾಜಶೇಖರ ರಾಹುತ, ಶಿವಾನಂದ ಜಕ್ಕಲಿ, ಮಂಜುನಾಥ ಕರೆಕೆಂಚಪ್ಪನವರ, ದ್ರಾಕ್ಷಾಯಣಿ ಮಾಗಳಮಠ, ಗಿರಿಜಾ ಕುರಿ ಹಾಗೂ ಶಿಕ್ಷಕರಾದ ನಾರಾಯಣ ಪೂಜಾರ, ರಮೇಶ ಮೇಕಳಿ, ರವಿಚಂದ್ರ ಜಂಗಣ್ಣವರ, ಪರಶುರಾಮ ಸಾಬಳೆ ಭಾರತಿ ತಳಕಲ್ಲ, ಯಲ್ಲಮ್ಮ ಜಂತ್ಲಿ, ಎಲ್ ಡಿ. ಬೊಮ್ಮನಹಳ್ಳಿ, ವಿ ಎಚ್.ನಾಯಕ ಇದ್ದರು.

loading...