ಗಾಡಿಕೊಪ್ಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ

0
28
loading...

ಖಾನಾಪುರ: ತಾಲೂಕಿನ ಗಾಡಿಕೊಪ್ಪ ಗ್ರಾಮದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಶೃದ್ಧಾಭಕ್ತಿಗಳಿಂದ ಸಂಪನ್ನಗೊಂಡಿತು. ಮಧ್ಯಾರಾಧನೆಯ ಅಂಗವಾಗಿ ಮಠದ ಅರ್ಚಕ ಅಚ್ಯುತಾಚಾರ್ಯ ಪಾಟೀಲ ಅವರ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ವಿವಿಧ ಪುಷ್ಪಗಳಿಂದ ಅಲಂಕಾರ, ಸಂಗೀತ ಸೇವೆ, ಮಹಾನೈವೇದ್ಯ ಕಾರ್ಯಕ್ರಮಗಳು ಜರುಗಿದವು.
ಆರಾಧನೆಯ ಅಂಗವಾಗಿ ಎಂ.ಕೆ ಹುಬ್ಬಳ್ಳಿಯ ಅಶ್ವತ್ಥ ನರಸಿಂಹ ಭಜನಾ ಮಂಡಳಿ, ಮತ್ತು ವಿವಿಧ ಗ್ರಾಮಗಳ ಮಹಿಳಾ ಭಜನಾ ಮಂಡಳಿಗಳಿಂದ ಹರಿವಾಯುಸ್ತುತಿ, ಪುರಂದರದಾಸರ ಪದಗಳು, ಭಕ್ತಿಗೀತೆಗಳ ಪಠಣ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು. ಕೀರ್ತನಕಾರ ಪಾಂಡುರಂಗಾಚಾರ್ ಪೂಜಾರ ಅವರು ರಾಘವೇಂದ್ರ ರಾಯರ ಮಹಿಮೆಯ ಬಗ್ಗೆ ವಿವರಿಸಿದರು. ಉಪನ್ಯಾಸಕಿ ಗೀತಾ ಪಾಂಡುರಂಗಿ ಹರಿಭಕ್ತಸಾರವನ್ನು ಓದಿದರು.
ಈ ಸಂದರ್ಭದಲ್ಲಿ ಆರ್.ಕೆ ಪಾಟೀಲ, ಕೃಷ್ಣಾಜಿ ಪಾಟೀಲ, ನಾರಾಯಣರಾವ್ ದೇಶಪಾಂಡೆ, ವಿಜಯ ಪಾಟೀಲ, ಅ.ರಾ ಕುಲಕರ್ಣಿ, ನಿರಂಜನ ಕುಲಕರ್ಣಿ, ಸುಂದರ ಕುಲಕರ್ಣಿ ಸೇರಿದಂತೆ ಇಟಗಿ, ಬೋಗೂರು, ದೇವಲತ್ತಿ, ಪಾರಿಶ್ವಾಡ ಮತ್ತು ಸುತ್ತಲಿನ ಗ್ರಾಮಗಳ ರಾಘವೇಂದ್ರ ರಾಯರ ಭಕ್ತರು ಭಾಗವಹಿಸಿದ್ದರು.

loading...